ದೇಶ

ರಾಜಸ್ತಾನ ರಾಜಕೀಯದಲ್ಲಿ 'ಕುದುರೆ ವ್ಯಾಪಾರ'?: ಸಿಎಂ ಅಶೋಕ್ ಗೆಹ್ಲೊಟ್ ವಿರುದ್ಧ ಬಿಜೆಪಿ ಶಾಸಕರು ಹಕ್ಕುಚ್ಯುತಿ ಮಂಡನೆ

Sumana Upadhyaya

ಜೈಪುರ:ಕಳೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ವಿವಾದಾತ್ಮಕ ಹೇಳಿಕೆ ರಾಜಸ್ತಾನ ರಾಜಕೀಯ ವಲಯದಲ್ಲಿ ನಿಜವಾಗುವ ಲಕ್ಷಣಗಳು ಕಾಣುತ್ತಿದೆ. ಬಿಜೆಪಿಯ ಹತ್ತು ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ವಿಧಾನಸಭಾ ಸ್ಪೀಕರ್ ಸಿ ಪಿ ಜೋಷಿ ಬಳಿ ದೂರು ನೀಡಿದ್ದಾರೆ.

ರಾಜಸ್ತಾನ ವಿಧಾನಸಭೆಯ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಶಾಸಕ ಸನ್ಯಮ್ ಲೋಧಾ ಅವರು ಸಲ್ಲಿಸಿರುವ ಹಕ್ಕು ಚ್ಯುತಿಗೆ ಸಂಬಂಧಪಟ್ಟಂತೆ ವಿಧಾನಸಭಾಧ್ಯಕ್ಷರು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರಿಗೆ ಸಮ್ಮನ್ಸ್ ಜಾರಿ ಮಾಡಿದ್ದಾರೆ.

ಗೆಹ್ಲೊಟ್ ವಿರುದ್ಧ ಮಾಡಲಾಗಿರುವ ಹಕ್ಕುಚ್ಯುತಿ ದೂರಿಗೆ ಸಂಬಂಧಿಸಿದಂತೆ ರಾಜಸ್ತಾನ ಪೊಲೀಸರ ವಿಶೇಷ ಕಾರ್ಯಪಡೆ ಎರಡು ಫೋನ್ ಕರೆಗಳ ಆಧಾರದ ಮೇಲೆ ಕೊನೆಗೂ ಎಫ್ಐಆರ್ ದಾಖಲಿಸಿದ್ದು ಇದುವರೆಗೆ ಪ್ರಕರಣ ಸಂಬಂಧ ಯಾರನ್ನೂ ವಿಚಾರಣೆ ನಡೆಸಿಲ್ಲ.

SCROLL FOR NEXT