ದೇಶ

ಕೋವಿಡ್-19 ಔಷಧ ಬೆಲೆ ಶೇ.27 ರಷ್ಟು ಕಡಿಮೆ ಮಾಡಿದ ಗ್ಲೆನ್ ಮಾರ್ಕ್ ಫಾರ್ಮ 

Srinivas Rao BV

ನವದೆಹಲಿ: ಮಧ್ಯಮ ಹಾಗೂ ಲಘು ಕೊರೋನಾ-19 ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡುವ ಫ್ಯಾಬಿಫ್ಲು ಬ್ರಾಂಡ್ ನ ಫೈವಿಪಿರಾವಿಯರ್ ಔಷಧಿಯ ಬೆಲೆಯನ್ನು ಶೇ.27 ರಷ್ಟು ಕಡಿಮೆ ಮಾಡಿರುವುದಾಗಿ ಔಷಧ ತಯಾರಿಕ ಸಂಸ್ಥೆ ಗ್ಲೆನ್ ಮಾರ್ಕ್ ಫಾರ್ಮ ತಿಳಿಸಿದೆ. 

ಕಳೆದ ತಿಂಗಳು ಬಿಡುಗಡೆಯಾಗಿ, ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಫ್ಯಾಬಿಫ್ಲು ಹೆಸರಿನ ಫೈವಿಪಿರಾವಿಯರ್ ಔಷಧಿಯ ಬಳಕೆಗೆ ಅನುಮತಿ ದೊರೆತಿತ್ತು. ಆಗ ಇದರ ಬೆಲೆ ಪ್ರತಿ ಮಾತ್ರೆಗೆ 103 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಪ್ರತಿ ಮಾತ್ರೆಯ ಬೆಲೆಯನ್ನು ಶೇ.27 ರಷ್ಟು ಅಂದರೆ 75 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹೆಚ್ಚು ಉತ್ಪಾದನೆ ಹಾಗೂ ಬೇಡಿಕೆಯ ಪರಿಣಾಮವಾಗಿ ಸಂಸ್ಥೆಗೆ ದೊರೆತ ಲಾಭವನ್ನು ಜನರಿಗೆ ತಲುಪಿಸಲು ಬೆಲೆ ಇಳಿಕೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.

ಫೈವಿಪಿರಾವಿಯರ್ ಗೆ ಅನುಮತಿ ನೀಡಲಾದ ದೇಶಗಳ ಮಾರುಕಟ್ಟೆಗಳಲ್ಲಿ ನಿಗದಿ ಮಾಡಿದ್ದಕ್ಕಿಂತಲೂ ಕಡಿಮೆ ಬೆಲೆಯನ್ನು ಭಾರತದಲ್ಲಿ ನಿಗದಿ ಮಾಡಲಾಗಿತ್ತು. ಈಗ ಬೆಲೆ ಮತ್ತಷ್ಟು ಕಡಿಮೆಯಾಗಿರುವುದರಿಂದ ರೋಗಿಗಳಿಗೆ ಸುಲಭವಾಗಿ ಈ ಔಷಧ ಸಿಗುವಂತಾಗುತ್ತದೆ ಎಂದು ಗ್ಲೆನ್ ಮಾರ್ಕ್ ಫಾರ್ಮಸ್ಯುಟಿಕಲ್ಸ್ ನ ಹಿರಿಯ ಉಪಾಧ್ಯಕ್ಷ ಹಾಗೂ ಭಾರತ ಉದ್ಯಮ ವಿಭಾಗದ ಮುಖ್ಯಸ್ಥ ಅಲೋಕ್ ಮಲೀಕ್ ಹೇಳಿದ್ದಾರೆ.

SCROLL FOR NEXT