ದೇಶ

ಪೆರಿಯಾರ್ ಪ್ರತಿಮೆ ವಿರೂಪ: ಕೊಯಮತ್ತೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

Lingaraj Badiger

ಕೊಯಮತ್ತೂರು: ಇಲ್ಲಿನ ಸುಂದರಪುರಂನಲ್ಲಿನ ದ್ರಾವಿಡ ಕಳಗಂ ಸ್ಥಾಪಕ ಮತ್ತು ವಿಚಾರವಾದಿ ಪೆರಿಯಾರ್ ಇ ವಿ ರಾಮಸ್ವಾಮಿ ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳಿಯುವುದರ ಮೂಲಕ ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಜವಳಿನಗರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಬೆಳಗಿನ ಜಾವ 5.30ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಮೆಗೆ ಬಳಿಯಲಾಗಿದ್ದ ಬಣ್ಣವು ಮಳೆಗೆ ಬಹುತೇಕ ತೊಳೆದುಹೋಗಿದ್ದರೂ ಉಳಿದ ಬಣ್ಣವನ್ನು ಅಳಸಿ, ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.

ಪ್ರತಿಮೆ ವಿರೂಪಗೊಳಿಸಿದ ಸುದ್ದಿ ಹರಡುತ್ತಿದ್ದಂತೆ ಪ್ರತಿಭಟನೆಗೆ ಇಳಿದ ಪೆರಿಯಾರ್‌ ಅನುಯಾಯಿಗಳು, ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಕೊಯಮತ್ತೂರು ಪೊಲೀಸ್ ಉಪ ಆಯುಕ್ತ ಜಿ. ಸ್ಟಾಲಿನ್ ಅವರು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

SCROLL FOR NEXT