ತಿರುಪತಿ ತಿರುಮಲ ದೇಗುಲ 
ದೇಶ

ತಿರುಪತಿ ದೇವಾಲಯದ ಜೀಯರ್ ಗೆ ಕೋವಿಡ್-19 ಸೋಂಕು ದೃಢ

ತಿರುಮಲ, ತಿರುಪತಿ ದೇವಸ್ಥಾನಂ (ಟಿಟಿಡಿಯ) ಆಗಮ ಶಾಸ್ತ್ರಗಳಿಗೆ ಅಧಿಕಾರಿಗಳಾಗಿರುವ ಜೀಯರ್ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಚಿತ್ತೂರು: ತಿರುಮಲ, ತಿರುಪತಿ ದೇವಸ್ಥಾನಂ (ಟಿಟಿಡಿಯ) ಆಗಮ ಶಾಸ್ತ್ರಗಳಿಗೆ ಅಧಿಕಾರಿಗಳಾಗಿರುವ ಜೀಯರ್ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಜೀಯರ್ ಗಳೆಂದರೆ ರಾಮಾನುಜಾಚಾರ್ಯರ ಅನುಯಾಯಿ ಪರಂಪರೆಗೆ ಸೇರಿದವರಾಗಿದ್ದು ತಿರುಪತಿ ದೇವಾಲಯದಲ್ಲಿ ಅನುಸರಿಸಲಾಗುವ ಪೂಜಾ ವಿಧಾನವಾದ ವೈಷ್ಣವ, ವೈಖಾನಸ ಆಗಮ ಪ್ರಕಾರಕ್ಕೆ ಜೀಯರ್ ಗಳೇ ಅಧಿಕಾರಿಗಳಾಗಿದ್ದು, ಅವರ ಮಾರ್ಗದರ್ಶನದಂತೆಯೇ ಪೂಜಾ ವಿಧಾನಗಳು ನೆರವೇರಿಸಲ್ಪಡುತ್ತವೆ.

ಜೀಯರ್ ಗೆ ಕೊರೋನಾದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು ತಕ್ಷಣವೇ ಅವರನ್ನು ಶ್ರೀವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಆಸ್ಪತ್ರೆಯ ಐಸೊಲೇಷನ್ ಗೆ ದಾಖಲಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!