ದೇಶ

121 ವಿದೇಶಿ ತಬ್ಲಿಘಿಗಳಿಗೆ ತವರಿಗೆ ಮರಳಲು ಕೋರ್ಟ್ ಅನುಮತಿ

Srinivas Rao BV

ನವದೆಹಲಿ: ಬಾಂಗ್ಲಾದೇಶದ 79 ತಬ್ಲಿಘಿಗಳು, ಕಿರ್ಗಿಜ್ ನ 42 ತಬ್ಲಿಘಿಗಳನ್ನು ಮರಳಿ ಅವರ ದೇಶಕ್ಕೆ ಹೋಗುವುದಕ್ಕೆ ದೆಹಲಿ ಕೋರ್ಟ್ ಜು.20 ರಂದು ಆದೇಶ ನೀಡಿದೆ.

ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮಾರ್ಚ್ ನಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಲೆಕ್ಕಿಸದೇ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳಿಂದ ತಬ್ಲಿಘಿ ಜಮಾತ್ ಸದಸ್ಯರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವೀಸಾ ನಿಯಮ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಲಾಗಿತ್ತು.

ಇತ್ತೀಚೆಗೆ ತಬ್ಲಿಘಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರಿಂದ ನ್ಯಾಯಾಲಯ ದಂಡ ವಿಧಿಸಿ ತಬ್ಲಿಘಿಗಳನ್ನು ವಾಪಸ್ ತಮ್ಮ ದೇಶಗಳಿಗೆ ತೆರಳಲು ಅನುಮತಿ ನೀಡಿದೆ.

121 ತಬ್ಲಿಘಿಗಳಿಗೆ ತಲಾ 5,00 ರೂಪಾಯಿ ದಂಡ ವಿಧಿಸಿರುವ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ. ಆದರೆ ಮೂವರು ಬಾಂಗ್ಲಾದೇಶದ ತಬ್ಲಿಘಿಗಳು ಹಾಗೂ ಕಿರ್ಗಿಜ್ ನ 8 ತಬ್ಲಿಘಿಗಳು ನ್ಯಾಯಾಲಯ ನೀಡಿರುವ ಆದೇಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

SCROLL FOR NEXT