ದೇಶ

ಚೀನಾ ಮೇಲೆ ಕಣ್ಣು: ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೆರಿಕಾ ನೌಕಪಡೆ ಜಂಟಿ ಸಮರಾಭ್ಯಾಸ!

Nagaraja AB

ನವದೆಹಲಿ: ಲಡಾಖ್ ಗಡಿ ಸಂಘರ್ಷ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವಣ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ,  ಬಂಗಾಳ ಕೊಲ್ಲಿಯ  ಅಂಡಮಾನ್ ನಿಕೋಬರ್ ದ್ವೀಪದ ಬಳಿ ಭಾರತ ಮತ್ತು ಅಮೆರಿಕಾ ನೌಕಪಡೆಗಳು ಜಂಟಿ ಸಮರಾಭ್ಯಾಸದಲ್ಲಿ ನಿರತವಾಗಿವೆ.

ಯುಎಸ್ಎಸ್ ನಿಮಿಟ್ಜ್ ನೇತೃತ್ವದ ಅಮೆರಿಕದ  ಫ್ಲೋಟಿಲ್ಲಾ ಪರಮಾಣು ಚಾಲಿತ ವಿಮಾನ ವಾಹಕ ನೌಕೆ ಹಾಗೂ ಭಾರತೀಯ ನೌಕಪಡೆಗಳು ಉಭಯ ಪಡೆಗಳ ನಡುವಣ ವಿಶ್ವಾಸ ಮೂಡಿಸಲು ಪಾಸೆಕ್ಸ್ (ನಿರ್ಗಮನ ವ್ಯಾಯಾಮದ )ಕುಶಲತೆಯ ಪ್ರದರ್ಶನ ನಡೆಸಿವೆ.

ಚೀನಾದ ವಿಸ್ತರಣಾವಾದಿ ಯೋಜನೆಗಳಿಗೆ ತಡೆಯೊಡುವ ನಿಟ್ಟಿನಲ್ಲಿ ನಿಮ್ಟಿಜ್ ಮತ್ತು ಮತ್ತೊಂದು ವಿಮಾನ ವಾಹನ ನೌಕೆ ರೋನಾಲ್ಡ್ ರೇಗನ್ ಮತ್ತು ನಾಲ್ಕು ಯುದ್ಧ ನೌಕೆಗಳು ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಕಾರ್ಯಾಚರಣೆ ಕಾರ್ಯನಿರ್ವಹಿಸುತ್ತಿವೆ.

ಯುಎಸ್ ಎಸ್ ನಿಮ್ಜಿಟ್ ಮತ್ತು ಯುಎಸ್ ಎಸ್ ರೋನಾಲ್ಡ್ ರೇಗಾನ್ ದಕ್ಷಿಣ ಚೀನಾ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದು, ಇಂಡೋ ಫೆಸಿಪಿಕ್ ಮುಕ್ತ ಮತ್ತು ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿರುವುದನ್ನು ಖಚಿತಪಡಿಸುವುದಾಗಿ ರೊನಾಲ್ಡ್ ರೇಗಾನ್ ಕ್ಯಾರಿಯರ್ ಸ್ಟ್ರೈಕ್ ಲೆಫ್ಟಿನೆಂಟ್ ಕಮಾಂಡರ್ ಸೀನ್ ಭ್ರೋಪಿ ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

SCROLL FOR NEXT