ಕೋವಿಡ್-19 ಲಸಿಕೆಯ ಪ್ರತಿ ಡೋಸ್ ಗೆ 1,000 ರೂಪಾಯಿ: ಸೆರಮ್ ಇನ್ಸ್ಟಿಟ್ಯೂಟ್ ಸಿಇಒ 
ದೇಶ

ಕೋವಿಡ್-19 ಲಸಿಕೆಯ ಪ್ರತಿ ಡೋಸ್ ಗೆ 1,000 ರೂಪಾಯಿ: ಸೆರಮ್ ಇನ್ಸ್ಟಿಟ್ಯೂಟ್ ಸಿಇಒ

ಕೋವಿಡ್-19 ಲಸಿಕೆಗೆ ಜಗತ್ತೇ ಎದುರುನೋಡುತ್ತಿದ್ದು, ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ನ ಸಿಇಒ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಸಿಕೆ ಕುರಿತು ಸಂದರ್ಶನ ನೀಡಿದ್ದಾರೆ. 

ಕೋವಿಡ್-19 ಲಸಿಕೆಗೆ ಜಗತ್ತೇ ಎದುರುನೋಡುತ್ತಿದ್ದು, ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ನ ಸಿಇಒ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಸಿಕೆ ಕುರಿತು ಸಂದರ್ಶನ ನೀಡಿದ್ದಾರೆ. 
  
ಇ-ಮೇಲ್ ಸಂದರ್ಶನದ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿರುವ ಸಿಇಒ ಅದಾರ್ ಪೂನಾವಾಲ, ಕೋವಿಡ್-19 ನ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುವುದು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾಧ್ಯವಾಗಲಿದೆ, ಮನುಷ್ಯನ ಮೇಲಿನ ಪ್ರಯೋಗ ಮುಂದಿನ ತಿಂಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಲಸಿಕೆ ಜನರ ಕೈಗೆ ತಲುಪುವ ವೇಳೆಗೆ ಅದರ ಬೆಲೆ ಇಂತಿಷ್ಟೇ ಇರಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲವಾದರೂ ಅಂದಾಜು ಪ್ರತಿ ಡೋಸ್ ಗೆ 1,000 ರೂಪಾಯಿ ಖರ್ಚಾಗಲಿದೆ ಎಂದು ಹೇಳಿದ್ದಾರೆ.

ಆಕ್ಸ್ವರ್ಡ್ ವಿವಿ ಸಹಯದಲ್ಲಿ ಲಸಿಕೆ ಅಭಿವೃದ್ಧಿ ಯಾವ ಹಂತದಲ್ಲಿದೆ?

ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ಲಸಿಕೆಯ ಮೇಲೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದೇವೆ. ಇದರ ಜೊತೆಗೆ ಆಗಸ್ಟ್ 2020 ರ ವೇಳೆಗೆ ಭಾರತದಲ್ಲಿ ಮನುಷ್ಯರ ಮೇಲೂ ಈ ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ನ ಸಿಇಒ ಅದಾರ್ ಪೂನಾವಾಲ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಲಸಿಕೆ ಯಾವಾಗ ದೊರೆಯಲಿದೆ? ಮಾಸ್ ಪ್ರೊಡಕ್ಷನ್ ಗೆ ಎಷ್ಟು ಸಮಯ ಬೇಕಾಗಬಹುದು?

ವೈಯಕ್ತಿಕ ರಿಸ್ಕ್ ತೆಗೆದುಕೊಂಡು ಪ್ರಾರಂಭದಲ್ಲಿ ಕೆಲವು ಮಿಲಿಯನ್ ನಷ್ಟು ಡೋಸ್ ಗಳನ್ನು ಉತ್ಪಾದಿಸುತ್ತೇವೆ, ಟ್ರಯಲ್ಸ್ ನ ಯಶಸ್ಸಿನ ಆಧಾರದಲ್ಲಿ ವರ್ಷಾಂತ್ಯಕ್ಕೆ ಲಸಿಕೆಯನ್ನು ಪರಿಚಯಿಸಲಿದ್ದೇವೆ.

"ಅಸ್ಟ್ರಾಜೆನೆಕಾ ಜೊತೆಗಿನ ಒಪ್ಪಂದದ ಪ್ರಕಾರ ಭಾರತ ಹಾಗೂ ಇನ್ನಿತರ ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಿಗಾಗಿಯೇ ನಾವು ಒಂದು ಬಿಲಿಯನ್ ಡೋಸ್ ನ್ನು ಉತ್ಪಾದಿಸಲು ಪ್ರಾರಂಭಿಸಲಿದ್ದೇವೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಜನರಿಗೆ ಲಸಿಕೆ ಲಭ್ಯವಾಗಲಿದೆ"

ಬೇರೆ ಫಾರ್ಮಾ ಸಂಸ್ಥೆಗಳೂ ಸಹ ಲಸಿಕೆ ಅಭಿವೃದ್ಧಿಪಡಿಸುತ್ತಿವೆ, ನಿಮ್ಮ ಸಂಸ್ಥೆಯ ಲಸಿಕೆಯ ವಿಶೇಷತೆ ಏನು?    

ಆಕ್ಸ್ ವರ್ಡ್ ವಿವಿಯಿಂದ ಅಭಿವೃದ್ಧಿಯಾಗುತ್ತಿರುವ ಈ ಲಸಿಕೆ ವೈರಲ್ ವೆಕ್ಟರ್ ವಿಧವಾಗಿದ್ದು, ಕೋವಿಡ್ ವಿರುದ್ಧ ಹೋರಾಡುವುದಕ್ಕೆ ಪ್ಯಾಥೋಜೆನ್ ನ ಜೆನೆಟಿಕ್ ಅಂಶವನ್ನು ಬಿಡುಗಡೆ ಮಾಡಲು ಅಪಾಯವಿಲ್ಲದ ವೈರಾಣುವನ್ನು ಬಳಕೆ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪನ್ನಗೊಂಡು ಕೋವಿಡ್-19 ಉಂಟುಮಾಡುವ ವೈರಾಣುವಿನ ವಿರುದ್ಧ ಸಮರ್ಥ ಹೋರಾಟ ಸಾಧ್ಯವಾಗಲಿದೆ" ಎಂದು ಪೂನಾವಾಲ ತಿಳಿಸಿದ್ದಾರೆ.

ಲಸಿಕೆಯ ಬೆಲೆ ಎಷ್ಟಿರಲಿದೆ?

ಅದನ್ನು ಈಗಲೇ ಹೇಳುವುದು ಕಷ್ಟ ಸಾಧ್ಯ, ಆದರೆ ಪ್ರತಿ ಡೋಸ್ ಗೆ 1,000 ರೂಪಾಯಿ ಮೀರದಂತೆ ನೋಡಿಕೊಳ್ಳುತ್ತೇವೆ, ಕೈಗೆಟುಕುವ ದರದಲ್ಲಿ ಲಸಿಕೆ ಅಭಿವೃದ್ಧಿಪಡಿಸಬೇಕೆಂಬುದು ನಮ್ಮ ಗುರಿ, ಸರ್ಕಾರ ಇದನ್ನು ತಯಾರಿಕೆಗೆ ತೆಗೆದುಕೊಂಡು ಶುಲ್ಕರಹಿತ ವಿತರಣೆಗೆ ಮುಂದಾಗಲಿದೆ ಎಂಬ ವಿಶ್ವಾಸವಿದೆ ಎಂದು ಪೂನಾವಾಲ ತಿಳಿಸಿದ್ದಾರೆ.

ಭಾರತ ಸರ್ಕಾರ ನಿಮ್ಮ ಲಸಿಕೆಯನ್ನು ವ್ಯಾಪಕವಾಗಿ ನೀಡುವ ಸಂಬಂಧ ಆಸಕ್ತಿ ತೋರಿ ನಿಮ್ಮನ್ನು ಸಂಪರ್ಕಿಸಿದೆಯೇ?

ಪರವಾನಗಿ ಪಡೆಯುವ ಹಂತದ ಪ್ರಯೋಗಗಳಿಗಾಗಿ ನಾವು ಔಷಧ ನಿಯಂತ್ರಕಗಳ ಜೊತೆಗೆ ಈ ವರೆಗೂ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ, ಪರವಾನಗಿ ದೊರೆಯಲು ಅನುಮತಿಗಾಗಿ ಕಾಯುತ್ತಿದ್ದೇವಷ್ಟೇ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT