ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎನ್ ಐಟಿ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ
ಪಡೆಯುತ್ತಿರುವ ತಾಂತ್ರಿಕ ಸಂಸ್ಥೆಗಳಲ್ಲಿನ ಪ್ರವೇಶ ಮಾನದಂಡದಲ್ಲಿ ಸಡಿಲಿಕೆ ಮಾಡಲಾಗಿದ್ದು,12ನೇ ತರಗತಿಯ ಬೋರ್ಡ್
ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 75 ರಷ್ಟು ಅಂಕಗಳ ಅಗತ್ಯತೆ ಇರಬೇಕಾಗಿಲ್ಲ.
ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎನ್ ಐಟಿಗಳು ಮತ್ತು ಇತರ ಕೇಂದ್ರಿಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶ
ಮಾನದಂಡಗಳಲ್ಲಿ ಸಡಿಲಿಕೆ ಮಾಡಲು ಕೇಂದ್ರೀಯ ಸೀಟು ಹಂಚಿಕೆ ಮಂಡಳಿ (ಸಿಎಸ್ಎಬಿ) ನಿರ್ಧರಿಸಿದೆ ಎಂದು ಕೇಂದ್ರ ಮಾನವ
ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವಿಟ್ ಮಾಡಿದ್ದಾರೆ.
2020 ಜೆಇಇ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಮಾತ್ರ ಈಗ ಪಡೆದ ಅಂಕಗಳ ಹೊರತಾಗಿಯೂ 12ನೇ ತರಗತಿಯ ಉತ್ತೀರ್ಣತೆಯ ಪ್ರಮಾಣ ಪತ್ರವನ್ನು ಹೊಂದಿರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಎನ್ ಐಟಿ ಮತ್ತಿತರ ಕೇಂದ್ರಿಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಜೆಇಇ ಮುಖ್ಯ ಪರೀಕ್ಷೆಗೆ ಅರ್ಹರಾದವರನ್ನು
ಹೊರತುಪಡಿಸಿದಂತೆ ಉಳಿದವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75 ರಷ್ಟು ಅಂಕ ಅಥವಾ ಅರ್ಹತಾ ಪರೀಕ್ಷೆಗಳ
ಶೇಕಡವಾರು ಫಲಿತಾಂಶದಲ್ಲಿ ಟಾಪ್ 20ರಲ್ಲಿ ಸ್ಥಾನ ಪಡೆಯಬೇಕಾಗಿತ್ತು.