ದೇಶ

ಸರ್ಕಾರ ಉರುಳಿಸಲು ಹಲವು ನಾಯಕರ ಸಂಚು: ಪ್ರಧಾನಿ ಮೋದಿಗೆ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಪತ್ರ!

Sumana Upadhyaya

ಜೈಪುರ: ತಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೆಸರನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಮೊನ್ನೆ ಭಾನುವಾರ ಗೆಹ್ಲೊಟ್ ಬರೆದ ಪತ್ರದಲ್ಲಿ, ಕೇಂದ್ರ ಸಚಿವ ಶೇಖಾವತ್, ಇತರ ಬಿಜೆಪಿ ನಾಯಕರನ್ನು ಮತ್ತು ತಮ್ಮ ಪಕ್ಷದ ಕೆಲವು ನಾಯಕರ ಹೆಸರುಗಳನ್ನು ಸೂಚಿಸಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮಗೆ ಎಷ್ಟು ಅರಿವಿದೆ, ಅಥವಾ ನಿಮಗೆ ಇದರಲ್ಲಿ ಯಾರಾದರೂ ತಪ್ಪು ಮಾಹಿತಿ ನೀಡುತ್ತಿದ್ದಾರೆಯೋ ಗೊತ್ತಿಲ್ಲ, ಈ ಕೆಲಸದಲ್ಲಿ ತೊಡಗಿರುವವರನ್ನು ಮಾತ್ರ ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಪತ್ರದಲ್ಲಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ವಿಚಾರದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿ ಸಚಿನ್ ಪೈಲಟ್ ಜೊತೆಗೆ 18 ಶಾಸಕರು ಬಂಡಾಯವೆದ್ದು ಹೊರನಡೆದಿರುವುದು ರಾಜಕೀಯ ಕಗ್ಗಂಟನ್ನು ಸೃಷ್ಟಿಸಿದೆ.

SCROLL FOR NEXT