ದೇಶ

ಜುಲೈ 31ಕ್ಕೆ ಅನ್ ಲಾಕ್ 2.0 ಕೊನೆ: 3ನೇ ಅನ್ ಲಾಕ್ ಹಂತದಲ್ಲಿ ಸಿನೆಮಾ ಹಾಲ್, ಜಿಮ್ ತೆರೆಯಲು ಅವಕಾಶ?

Sumana Upadhyaya

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧದ ಅನ್ ಲಾಕ್ 2.0 ಇದೇ ಶುಕ್ರವಾರ ಮುಗಿಯಲಿದ್ದು ಅನ್ ಲಾಕ್ 3.0 ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲು ಕಾರ್ಯನಿರತವಾಗಿದೆ.

ಅನ್ ಲಾಕ್ 3.0 ಆಗಸ್ಟ್ 1ರಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಶುಕ್ರವಾರ ಮುಗಿಯಲಿರುವ ಅನ್ ಲಾಕ್ 2.0ದಲ್ಲಿ ಹಲವು ವಿಷಯಗಳಿಂದ ನಿರ್ಬಂಧ ಸಡಿಲಿಸಿ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಬಹುದು. ಇನ್ನಷ್ಟು ನಿರ್ಬಂಧ ಸಡಿಲಿಸಬಹುದು ಎಂದು ಹೇಳಲಾಗುತ್ತಿದೆ.

ಆಗಸ್ಟ್ 1ರಿಂದ ನಿರ್ದಿಷ್ಟ ಕಾರ್ಯವಿಧಾನ, ಸಾಮಾಜಿಕ ಅಂತರದ ಕಟ್ಟುಪಾಡುಗಳೊಂದಿಗೆ ಸಿನೆಮಾ ಹಾಲ್,ಜಿಮ್ ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಮೂರನೇ ಅನ್ ಲಾಕ್ ಹಂತದಲ್ಲಿ ಮೆಟ್ರೋ ಸಂಚಾರ ಸೇವೆ, ಶಾಲಾ ಕಾಲೇಜುಗಳಿಗೆ ನಿರ್ಬಂಧ ಮುಂದುವರಿಯಬಹುದು.

ಶಾಲಾ ಕಾಲೇಜುಗಳನ್ನು ತೆರೆಯಲು ಆಯಾ ರಾಜ್ಯ ಸರ್ಕಾರಗಳ ಜೊತೆ ಮಾನವ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅನಿತಾ ಕರ್ವಾಲಾ ಇತ್ತೀಚೆಗೆ ಸಮಾಲೋಚನಾ ಸಭೆ ನಡೆಸಿದ್ದರು. ಶಾಲೆಗಳ ಪುನರಾರಂಭ ಬಗ್ಗೆ ಪೋಷಕರಿಂದ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಇತ್ತೀಚೆಗೆ ಹೇಳಿದ್ದರು.

SCROLL FOR NEXT