ದೇಶ

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಓಮರ್ ಅಬ್ದುಲ್ಲಾ

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ, ಎನ್ ಸಿಪಿ ನಾಯಕ ಓಮರ್ ಅಬ್ದುಲ್ಲಾ ಪ್ರತಿಜ್ಞೆ ಮಾಡಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370ಯ ರದ್ದತಿಗೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲೇಖನ ಬರೆದಿರುವ ಓಮರ್ ಅಬ್ದುಲ್ಲಾ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. 

ಹೆಚ್ಚು ಅಧಿಕಾರ ಹೊಂದಿದ್ದ ಜಮ್ಮು-ಕಾಶ್ಮೀರದ ವಿಧಾನಸಭೆಗೆ ಸದಸ್ಯನಾಗಿದ್ದವನು ಈಗ ಅಧಿಕಾರವೇ ಇಲ್ಲದಂತಾಗಿರುವ ವಿಧಾನಸಭೆಗೆ ಸದಸ್ಯನಾಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಆರ್ಟಿಕಲ್ 35A ಮೂಲಕ ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದು ಅಚ್ಚರಿಯ ಸಂಗತಿಯೇನು ಆಗಿರಲಿಲ್ಲ. ಆದರೆ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದು ಆಘಾತವಾಗಿತ್ತು. ಈ ರೀತಿ ಮಾಡಿದ್ದು ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ. ರಾಜ್ಯದ ಜನತೆಯನ್ನು ಶಿಕ್ಷಿಸುವುದಕ್ಕೆ ಅಲ್ಲದೇ ಬೇರಾವ ಕಾರಣದಿಂದಲೂ ಈ ರೀತಿ ಮಾಡಿರಲು ಸಾಧ್ಯವಿಲ್ಲ ಎಂದು ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಬೌದ್ಧ ಜನಸಂಖ್ಯೆ ಇರುವ ಲಡಾಖ್ ನಲ್ಲಿರುವ ಜನರ ಬೇಡಿಕೆಯಂತೆ ಲಡಾಖ್ ನ್ನು ಪ್ರತ್ಯೇಕಗೊಳಿಸಿದ್ದಾದರೆ ಜಮ್ಮುವಿನಲ್ಲೂ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇದೆ. ಅಥವಾ ಧಾರ್ಮಿಕ ಕಾರಣದ ಆಧಾರದಿಂದ ಮಾಡಿದ್ದೇ ಆಗಿದ್ದಲ್ಲಿ ಮುಸ್ಲಿಮರೇ ಹೆಚ್ಚಾಗಿರುವ ಕಾರ್ಗಿಲ್ ಹಾಗೂ ಲೇಹ್ ನ್ನು ಕಡೆಗಣಿಸಲಾಗಿದೆ ಇಲ್ಲಿರುವ ಜನರು ಜಮ್ಮು-ಕಾಶ್ಮೀರದಿಂದ ಪ್ರತ್ಯೇಕಗೊಳ್ಳಲು ಸಮ್ಮತಿಸಿರಲಿಲ್ಲ.

ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370 ನೀಡಿದ್ದು ಅದಕ್ಕೆ ದಯೆಯಾಗಿ ನೀಡಿದ್ದಲ್ಲ. ಆರ್ಟಿಕಲ್ 370 ಗೆ ಯಾವುದೇ ಕಾಲಮಿತಿಯನ್ನೂ ನಿಗದಿಪಡಿಸಿರಲಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.

SCROLL FOR NEXT