ದೇಶ

2020ರಲ್ಲಿ 179 ವೃತ್ತಿಪರ ಕಾಲೇಜುಗಳಿಗೆ ಬೀಗ, 9 ವರ್ಷಗಳಲ್ಲೇ ಅತಿ ಹೆಚ್ಚು! 

Srinivas Rao BV

ನವದೆಹಲಿ: 2020-21 ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆ 179 ವೃತ್ತಿಪರ  ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳು ಮುಚ್ಚಲ್ಪಟ್ಟಿದ್ದು 9 ವರ್ಷಗಳಲ್ಲಿ ಇದು ದಾಖಲೆಯ ಪ್ರಮಾಣವಾಗಿದೆ. 

ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಗಳು, ಬ್ಯುಸಿನೆಸ್ ಸ್ಕೂಲ್ ಗಳು ಸೇರಿದಂತೆ ತಾಂತ್ರಿಕ ಸಂಸ್ಥೆಗಳು ಕಳೆದ 9 ವರ್ಷಗಳಲ್ಲೇ ಅತಿ ಹೆಚ್ಚು ಮುಚ್ಚಲ್ಪಟ್ಟಿವೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಂಕಿ-ಅಂಶ ಬಿಡುಗಡೆ ಮಾಡಿದೆ. 

179 ಸಂಸ್ಥೆಗಳ ಹೊರತಾಗಿ, ಕಳೆದ 5 ವರ್ಶಗಳಿಂದ ಹೆಚ್ಚಿನ ಸಂಖ್ಯೆಯ ಸೀಟ್ ಗಳು ಖಾಲಿ ಇರುವುದರಿಂದ 134 ಸಂಸ್ಥೆಗಳು ತಾಂತ್ರಿಕ ಪರಿಷತ್ ನಿಂದ ಅನುಮತಿಯನ್ನು ಪಡೆಯಲಿಲ್ಲ. ಅದು ಕಾರಣ ಅವುಗಳೂ ಸಹ ಮುಚ್ಚಿವೆ ಎಂದು ಎಐಸಿಟಿಇ ಹೇಳಿದೆ. 

ಇನ್ನು 44 ಸಂಸ್ಥೆಗಳು ಪರಿಷತ್ ನಿಂದ ಅನುಮೋದನೆ ಪಡೆಯಲಿಲ್ಲ ಅಥವಾ ಅರ್ಜಿಗಳನ್ನು ಹಿಂಪಡೆದಿವೆ. 
2019-20 ರಲ್ಲಿ 92 ತಾಂತ್ರಿಕ ಇನ್ಸ್ಟಿಟ್ಯೂಟ್ ಗಳು ಮುಚ್ಚಿದ್ದವು 2018-19 ರಲ್ಲಿ 89, 2017-18 ರಲ್ಲಿ 134. 2016-17 ರಲ್ಲಿ 163 2015-16 ರಲ್ಲಿ 126 2014-15 ರಲ್ಲಿ 77 ತಾಂತ್ರಿಕ ಸಂಸ್ಥೆಗಳು ಮುಚ್ಚಿದ್ದವು.

SCROLL FOR NEXT