ದೇಶ

ವಡೋದರಾ ಸೆಂಟ್ರಲ್ ಜೈಲಿನ  60 ಕೈದಿಗಳಿಗೆ ಕೋವಿಡ್-19 ಪಾಸಿಟಿವ್!

Nagaraja AB

ಅಹಮದಾಬಾದ್:  ಕಳೆದ ಎರಡು ದಿನಗಳಲ್ಲಿ  ಗುಜರಾತಿನ ವಡೋದರಾ ಸೆಂಟ್ರಲ್ ಜೈಲಿನ 60 ಕೈದಿಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಂಕಿತ ಕೈದಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಜೈಲಿನ ಒಳಗಡೆ 80 ಹಾಸಿಗೆಗಳ ಕೋವಿಡ್-19 ಆರೈಕೆ  ಕೇಂದ್ರವನ್ನು ಸ್ಥಾಪಿಸುವ ಕಾರ್ಯದಲ್ಲಿ ಜೈಲಿನ ಆಡಳಿತ ಮಂಡಳಿ ತೊಡಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಈವರೆಗೂ150 ಕೈದಿಗಳ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 17 ಮಂದಿಗೆ ಭಾನುವಾರ ಸೋಂಕು ತಗುಲಿರುವುದು ದೃಢಪಟ್ಟಿತ್ತು.ಉಳಿದ 43 ಕೈದಿಗಳಿಗೆ ಸೋಮವಾರ ಲಕ್ಷಣ ರಹಿತ ಪಾಸಿಟಿವ್ ಕಂಡುಬಂದಿದೆ ಎಂದು ವಿಶೇಷ  ಕರ್ತವ್ಯಧಿಕಾರಿ ವಿನೋದ್ ರಾವ್ ತಿಳಿಸಿದ್ದಾರೆ.

ಪ್ರಸ್ತುತ ಆರು ವೈದ್ಯರು ಜೈಲಿನಲ್ಲಿದ್ದು, ಪೂರ್ಣವಧಿಯ ಸೇವೆ ಸಲ್ಲಿಸುತ್ತಿದ್ದಾರೆ. ಸೋಮವಾರ 82 ಪ್ರಕರಣಗಳು ವಡೋದರಾದಲ್ಲಿ ಕಂಡುಬಂದಿದ್ದು, ಈ ಪೈಕಿ 43 ಕೇಸ್ ಗಳು  ಸೆಂಟ್ರಲ್ ಜೈಲಿನಿಂದಲೇ ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.

ಜೈಲಿನ ಒಳಗಡೆ 80 ಹಾಸಿಗೆಗಳ ಕೋವಿಡ್- ಕೇರ್ ಸೆಂಟರ್ ಸ್ಥಾಪನೆ ಕಾರ್ಯ ವಾರದೊಳಗೆ ಮುಗಿಯಲಿದೆ.ಎಸ್ ಎಸ್ ಜಿ ಸರ್ಕಾರಿ ಆಸ್ಪತ್ರೆ ಇದರ ಮೇಲ್ವಿಚಾರಣೆ ನಡೆಸಲಿದೆ ಎಂದು ರಾವ್ ತಿಳಿಸಿದ್ದಾರೆ. 

SCROLL FOR NEXT