ದೇಶ

ಚಹಾ ಕೂಟಕ್ಕೆ ಬರಲಾಗಲಿಲ್ಲ, ನೀವು ಭೋಜನ ಕೂಟಕ್ಕೆ ಬನ್ನಿ: ಅನಿಲ್ ಬಲೂನಿಯಿಂದ ಪ್ರಿಯಾಂಕಾಗೆ ಆಹ್ವಾನ

Shilpa D

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೆಹಲಿಯಲ್ಲಿ ತನಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವ ಮುನ್ನ, ಆ ಬಂಗಲೆಯಲ್ಲೇ ವಾಸ್ಥವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲೂನಿ ಮತ್ತು ಅವರ ಕುಟುಂಬವನ್ನು ಚಹಾ ಕೂಟಕ್ಕೆ ಆಹ್ವಾನಿಸಿದ್ದರು.

ಆದರೆ ಚಹಾಕೂಟಕ್ಕೆ ಆಗಮಿಸದ ಅನಿಲ್ ಬಲೂನಿ ಪ್ರಿಯಾಂಕಾ ಅವರ ಕುಟುಂಬವನ್ನು ಭೂಜನಕೂಟಕ್ಕೆ ಆಹ್ವಾನಿಸಿದ್ದಾರೆ. ಚಹಾ ಕೂಟಕ್ಕೆ ಬರಲಾಗಲಿಲ್ಲ, ಹೀಗಾಗಿ ನೀವು ಭೋಜನ ಕೂಟಕ್ಕೆ ಬನ್ನಿ, ಉತ್ತರಾಖಂಡ್ ನ ಎಲ್ಲಾ ಸಾಂಪ್ರಾದಾಯಿಕ ಆಹಾರದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಾನು ಕ್ಯಾನ್ಸರ್ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದೇನೆ, ಸದ್ಯ ವೈದ್ಯರು ಮನೆಯಲ್ಲೇ ಇರಲು ಹೇಳಿದ್ದಾರೆ, ಹೀಗಾಗಿ ನೀವು ಭೋಜನಕ್ಕೆ ಬನ್ನಿ ಎಂದು ಬಲುನಿ ಪ್ರಿಯಾಂಕಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಜುಲೈ 1ಕ್ಕೆ ನೊಟೀಸ್ ಜಾರಿ ಮಾಡಿರುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಆಗಸ್ಟ್ 01 ರ ಒಳಗಾಗಿ ಮನೆಯನ್ನು ಖಾಲಿ ಮಾಡುವಂತೆ ಸೂಚಿಸಿತ್ತು. ಹೀಗಾಗಿ ಭವಿಷ್ಯದಲ್ಲಿ ಆ ಮನೆಯಲ್ಲಿ ವಾಸ್ತವ್ಯ ಹೂಡಲಿರುವ ಅನಿಲ್ ಬಲೂನಿ ಅವರ ಜೊತೆ ಒಂದು ಚಹಾ ಕೂಟ ಏರ್ಪಡಿಸಲು ಪ್ರಿಯಾಂಕ ಮುಂದಾಗಿದ್ದರು. 

“ಸರ್ಕಾರದ ಆದೇಶಕ್ಕೆ  ನಾವು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದೇವೆ. ಅಲ್ಲದೆ, ನಿಗದಿತ ಸಮಯದ ಒಳಗಾಗಿ ಸರ್ಕಾರಿ ವಸತಿಯನ್ನು ಖಾಲಿ ಮಾಡಲು ನಾವು ಸಿದ್ದರಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ಧಾರೆ.
 

SCROLL FOR NEXT