ದೇಶ

ಜಮ್ಮು-ಕಾಶ್ಮೀರಕ್ಕೆ ಪುನಃ ರಾಜ್ಯ ಸ್ಥಾನಮಾನಕ್ಕಾಗಿ ನಾನು ಬೇಡಿಕೆ ಇಟ್ಟಿಲ್ಲ: ಓಮರ್ ಅಬ್ದುಲ್ಲಾ

Srinivas Rao BV

ಶ್ರೀನಗರ: ಕೇಂದ್ರಾಡಳಿತವಾಗಿರುವ ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂಬುದನ್ನು ಮಾಧ್ಯಮದವರು ತಿರುಚಿದ್ದಾರೆಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. 

ತಮ್ಮ ಲೇಖನದಲ್ಲಿದ್ದ ಅಂಶವನ್ನು ತಿರುಚಿದ್ದ ಪತ್ರಕರ್ತರು ತಾವು ಜಮ್ಮು-ಕಾಶ್ಮೀರಕ್ಕೆ ಪುನಃ ರಾಜ್ಯದ ಸ್ಥಾನಮಾನವನ್ನು ಕಲ್ಪಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದೆ ಎಂಬ ಅರ್ಥದಲ್ಲಿ ಸುದ್ದಿ ಪ್ರಕಟಿಸಿದ್ದಾರೆ. ಆದರೆ ನಾನು ಅಂತಹ ಬೇಡಿಕೆ ಮುಂದಿಟ್ಟಿರಲಿಲ್ಲ ಎಂದು ಓಮರ್ ಅಬ್ದುಲ್ಲಾ ಸಮರ್ಥಿಸಿಕೊಂಡಿದ್ದಾರೆ. 

ತಮ್ಮ ಲೇಖನದಲ್ಲಿ ನಲ್ಲಿ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ವಾಪಸ್ ನೀಡಬೇಕೆಂಬ ಬೇಡಿಕೆಯನ್ನು ತೋರಿಸಲಿ ಎಂದು ಪತ್ರಕರ್ತರಿಗೆ ಸವಾಲು ಹಾಕಿದ್ದಾರೆ. 

ನನ್ನ ಅಭಿಪ್ರಾಯದೊಂದಿಗೆ ಸಹಮತ ಇಲ್ಲದೇ ಒಪ್ಪದೇ ಇದ್ದರೆ ಸಮಸ್ಯೆ ಇಲ್ಲ. ಆದರೆ ನಾನು ಹೇಳದೇ ಇರುವುದನ್ನು ಹೇಳಿದ್ದೇನೆಂದಾಗ ಅದು ನೀವು ಏನೆಂಬುದನ್ನು ತೋರಿಸುತ್ತದೆ ಎಂದು ಓಮರ್ ಅಬ್ದುಲ್ಲಾ ಪತ್ರಕರ್ತರ ವಿರುದ್ಧ ಕಿಡಿ ಕಾರಿದ್ದಾರೆ.

ನನ್ನ ಟ್ವೀಟ್ ನಲ್ಲಿ ಎಲ್ಲಿಯಾದರೂ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನ ವಾಪಸ್ ನೀಡಬೇಕೆಂಬ ಬೇಡಿಕೆ ಇದ್ದರೆ ತೋರಿಸಲಿ ಆಲಸಿ ಪತ್ರಕರ್ತರು ಎಂದು ಕಠಿಣ ಶಬ್ದಗಳಲ್ಲಿ ಟ್ವೀಟ್ ಮಾಡಿದ್ದಾರೆ.

SCROLL FOR NEXT