ದೇಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರ, ಲಾಂಚ್​ಪ್ಯಾಡ್​ಗಳು ಭರ್ತಿ: ಸೇನೆ ಎಚ್ಚರಿಕೆ

Srinivasamurthy VN

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಇರುವ ಉಗ್ರರ ಶಿಬಿರಗಳು ಮತ್ತು 15 ಲಾಂಚ್​ಪ್ಯಾಡ್​ಗಳು ಉಗ್ರರಿಂದ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲೂ ವಿಧ್ವಂಸಕ ಕೃತ್ಯಗಳಿಗೆ ಮುಂದಾಗಬಹುದು ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸೇನೆಯ ಲೆಫ್ಟಿನೆಂಟ್​ ಜನರಲ್​ ಬಿ.ಎಸ್​. ರಾಜು ಅವರು, ಪಾಕ್​ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಇರುವ ಉಗ್ರರ ಶಿಬಿರಗಳು ಮತ್ತು 15 ಲಾಂಚ್​ಪ್ಯಾಡ್​ಗಳು ಉಗ್ರರಿಂದ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲೂ ವಿಧ್ವಂಸಕ ಕೃತ್ಯಗಳಿಗೆ  ಮುಂದಾಗಬಹುದು. ಬೇಸಿಗೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಹಿಮ ಕಡಿಮೆಯಾಗುವುದರಿಂದ, ಭಾರತದಲ್ಲಿ ಉಗ್ರರ ಒಳ ನುಸುಳುವಿಕೆಯ ಪ್ರಯತ್ನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉಗ್ರರರನ್ನು ಗಡಿಯೊಳಗೆ ನುಸುಳಿಸಲು ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ
ಇನ್ನು ಉಗ್ರರ ಗಡಿ ನುಸುಳುವಿಕೆಗೆ ಅನುವು ಮಾಡಿಕೊಡಲು ಪಾಕ್​ ಯೋಧರು ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದ ರಾಜು ಅವರು ಪಾಕಿಸ್ತಾನ ಸೇನೆಯ ದಾಳಿಗೆ ತಕ್ಕದುದಾದ ಪ್ರತಿ ದಾಳಿ ಮಾಡುವ ಮೂಲಕ ಸೇನೆ ಉಗ್ರರ  ಒಳನುಸುಳುವಿಕೆಯನ್ನು ವಿಫಲಗೊಳಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಯಾಶೀಲರಾಗಿದ್ದ ಉಗ್ರರ ಪಡೆಯ ಬೆನ್ನೆಲುಬನ್ನೇ ಭದ್ರತಾಪಡೆಗಳು ಪುಡಿಗಟ್ಟಿವೆ.

ಇದೀಗ ಕಣಿವೆ ರಾಜ್ಯ ಹಾಗೂ ಕಣಿವೆ ಕೇಂದ್ರಾಡಳಿತ ಪ್ರದೇಶದ ಜನರು ಶಾಂತಿ ಹಾಗೂ ನೆಮ್ಮದಿಯಿಂದ  ಬದುಕುತ್ತಿರುವುದನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನ, ಅಲ್ಲಿ ಸೊರಗುತ್ತಿರುವ ಉಗ್ರರ ಸಂಖ್ಯೆಯನ್ನು ಹೆಚ್ಚಿಸಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು. ಈ  ಕಾರಣಕ್ಕಾಗಿ ಪಿಒಕೆಯಲ್ಲಿ ಇರುವ ಎಲ್ಲ ಉಗ್ರರ ಶಿಬಿರಗಳು ಮತ್ತು 15 ಲಾಂಚ್​ಪ್ಯಾಡ್​ಗಳಲ್ಲಿ ಉಗ್ರರನ್ನು ಸಂಪೂರ್ಣವಾಗಿ ಭರ್ತಿಗೊಳಿಸಲಾಗಿದೆ. ಇವರೆಲ್ಲರೂ ಒಳನುಸುಳುವಿಕೆಗೆ ಸಿಗುವ ಅವಕಾಶದ ನಿರೀಕ್ಷೆಯಲ್ಲಿ ಸನ್ನದ್ಧರಾಗಿ ಕುಳಿತಿದ್ದಾರೆ ಎಂದು ರಾಜು ಹೇಳಿದರು.
 

SCROLL FOR NEXT