ಜಿಯೋ 
ದೇಶ

ಮತ್ತೊಂದು ಬೊಂಬಾಟ್ ರೀಚಾರ್ಜ್ ಆಫರ್ ಪ್ರಕಟಿಸಿದ ಜಿಯೋ

ದೇಶದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ, ಜೂನ್ ತಿಂಗಳ ಸ್ಪೇಷಲ್ ರಿಚಾರ್ಜ್ ಪ್ಯಾಕ್ ಕೊಡುಗೆ ಪ್ರಕಟಿಸಿದೆ. ಬಳಕೆದಾರರಿಗೆ ಬೆಸ್ಟ್ ಆಫರ್ ನೀಡಲಿದ್ದು ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರೆ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ.

ಮುಂಬೈ: ದೇಶದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ, ಜೂನ್ ತಿಂಗಳ ಸ್ಪೇಷಲ್ ರಿಚಾರ್ಜ್ ಪ್ಯಾಕ್ ಕೊಡುಗೆ ಪ್ರಕಟಿಸಿದೆ. ಬಳಕೆದಾರರಿಗೆ ಬೆಸ್ಟ್ ಆಫರ್ ನೀಡಲಿದ್ದು ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರೆ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ.

ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರೀಚಾರ್ಜ್ ಆಫರ್ ಗಳನ್ನು ನೀಡಲು ಮುಂದಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಅದಕ್ಕಿಂತ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಬಳಕೆದಾರರು ಜೂನ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ರಿಲಯನ್ಸ್ ಡಿಜಿಟಲ್, ಎಜಿಯೊ, ಟ್ರೆಂಡ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ ತಲಾ ಒಂದು ರಿಯಾಯಿತಿ ಕೂಪನ್ ಪಡೆಯಲಿದ್ದಾರೆ.

ಜಿಯೋ ಬಳಕೆದಾರರು ಜೂನ್ ನಲ್ಲಿ ರೂ.249 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಗಳನ್ನು ಮಾಡಿಸಿಕೊಂಡಲ್ಲಿ 4X ಹೆಚ್ಚು ಲಾಭದ ಈ ಕೊಡುಗೆ ಅನ್ವಯವಾಗುತ್ತದೆ. ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೈಜಿಯೊ, ಜಿಯೋ.ಕಾಮ್, ಜಿಯೋ ಪೋಸ್ ಲೈಟ್, ಹತ್ತಿರದ ಜಿಯೋ ಸ್ಟೋರ್, ಫೋನ್ ಪೇ / ಗೂಗಲ್ ಪೇ ಪೇಟಿಎಂ  ಅಮೆಜಾನ್ ಪೇ/ ಜಿಯೋಮನಿ ಇತ್ಯಾದಿಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು.

ಮೈಜಿಯೋ ಅಪ್ಲಿಕೇಶನ್ ನಲ್ಲಿ 'ಕೂಪನ್' ವಿಭಾಗದ ಅಡಿಯಲ್ಲಿ ಕೂಪನ್ ಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಕೂಪನ್ ಅನ್ನು 72 ಗಂಟೆಗಳ ಒಳಗೆ ಜಮಾ ಮಾಡಲಾಗುತ್ತದೆ. ರೂ. 249 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಿದವರಿಗೆ ಮಾತ್ರ ದೊರೆಯಲಿದೆ.

ಈ ಜಿಯೋ ಹೊಸ ಯೋಜನೆ ಎಲ್ಲಾ ಜಿಯೋ ಬಳಕೆದಾರರಿಗೆ ಲಭ್ಯವಿದೆ, ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಬಳಕೆಯನ್ನು ಆರಂಭಿಸುವವರಿಗೂ ಈ ಯೋಜನೆ ಲಭ್ಯವಿರಲಿದೆ. ಜಿಯೋ ಬಳಕೆದಾರರು ಜೂನ್ 1 ರಿಂದ 2020 ರ ಜೂನ್ 30ರ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಮೈಜಿಯೊದ ಕೂಪನ್ ವಿಭಾಗದಲ್ಲಿ ಕೂಪನ್ ಗಳು ಲಭ್ಯವಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT