ದೇಶ

ಅವಶ್ಯಕ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಸಂಪುಟ ಅನುಮೋದನೆ, ರೈತರಿಗೆ ಲಾಭ!

Vishwanath S

ನವದೆಹಲಿ: ಅವಶ್ಯಕ ವಸ್ತುಗಳ ಕಾಯ್ದೆಗೆ ಐತಿಹಾಸಿಕ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತರು ಈಗ ಸರಕುಗಳನ್ನು ತಮ್ಮ ಇಚ್ಛೆಯಂತೆ ರಫ್ತು ಮಾಡಬಹುದು ಅಥವಾ ಸಂಗ್ರಹಿಸಬಹುದು. ಸುಮಾರು 50 ವರ್ಷಗಳಿಂದ ಬಾಕಿ ಉಳಿದಿರುವ ನಮ್ಮ ರೈತರ ಬೇಡಿಕೆಗಳು ಇವು ಎಂದು ಜಾವಡೇಕರ್ ಹೇಳಿದರು. ಅಭೂತಪೂರ್ವ ಅವಧಿಗಳಾದ ವಿಪತ್ತು, ಯುದ್ಧ ಅಥವಾ ಹಣದುಬ್ಬರ ಉದ್ಭವಿಸುವವರೆಗೆ ಈ ನಿರ್ಬಂಧಗಳು ಮತ್ತೆ ಅನ್ವಯಿಸುವುದಿಲ್ಲ. ಇದರ ಪರಿಣಾಮವಾಗಿ, ರೈತರಿಗೆ ಉತ್ತಮ ಲಾಭ ಸಿಗುತ್ತದೆ ಎಂದು ಸಚಿವರು ಹೇಳಿದರು.

ಈ ಕಾಯ್ದೆ ಮೂಲಕ "ಕೃಷಿ ಉತ್ಪಾದಕ ಮಾರುಕಟ್ಟೆ ಸಮಿತಿಯ ಹಿಡಿತದಿಂದ ರೈತರು ಮುಕ್ತರಾಗಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ. ರೈತರು ಈಗ ಎಲ್ಲಿಯಾದರೂ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡುವ ಮತ್ತು ಹೆಚ್ಚಿನ ಸಂಭಾವನೆ ಪಡೆಯುವ ಪಕ್ಷಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತದೆ.

SCROLL FOR NEXT