ದೇಶ

ಪ್ರೀತಿಪಾತ್ರನ ಅಗಲಿಕೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನ!

Raghavendra Adiga

ಝಾರ್ಸುಗುಡ(ಒಡಿಶಾ): ಪ್ರೀತಿಪಾತ್ರರಾಗಿದ್ದವರ ಸಾವಿನಿಂದ ಮನನೊಂದ ಒಂದೇ ಕುಟುಂಬದ ಐವರು ಫಿನಾಯಿಲ್ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ದುರಂತ ಘಟನೆ ಒಡಿಶಾದ ಝಾರ್ಸುಗುಡ ಲಹಂದಾಬೂಡ್‌ನಲ್ಲಿ ನಲ್ಲಿ ನಡೆದಿದೆ.

ಗಂಬೀರ ಸ್ಥಿತಿಯಲ್ಲಿದ್ದ ಅವರನ್ನು  ಜಿಲ್ಲಾ ಕೇಂದ್ರ ಆಸ್ಪತ್ರೆಗೆ (ಡಿಎಚ್‌ಹೆಚ್) ಕರೆದೊಯ್ಯಲಾಯಿತು ಮತ್ತು ಸ್ಥಿತಿ ಹದಗೆಟ್ಟ ಬಳಿಕ ಅವರಲ್ಲಿ ಓರ್ವನನ್ನು  ಬುರ್ಲಾದ ವಿಮ್ಸಾರ್‌ಗೆ ಸ್ಥಳಾಂತರಿಸಲಾಯಿತು.

ಘಟನೆ ವಿವರ:
ದೀಪಕ್ ಬಿಸ್ವಾಲ್ (22) ಎಂಬಾತ 2018ರಲ್ಲಿ ನಡೆಅದ ದ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಕೋಮಾ ಸ್ಥಿತಿಗೆ ಹೋಗಿದ್ದರು. ಅವರ ಚಿಕಿತ್ಸೆಗಾಗಿ ಅವರ ಕುಟುಂಬ ಸದಸ್ಯರು ಸುಮಾರು 30 ಲಕ್ಷ ರೂ. ಖರ್ಚು ಮಾಡಿದ್ದಾರೆ. ಬಳಿಕ ದೀಪಕ್ ಸ್ಥಿತಿ ಸುಧಾರಿಸಿದ ಹಿನ್ನೆಲೆ ಅವರನ್ನು ಮನೆಗೆ ಕರೆತರಲಾಗಿದೆ. ಸೋಮವಾರ, ಇದ್ದಕ್ಕಿದ್ದಂತೆ ದೀಪಕ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರ ಸ್ನೇಹಿತರು ಅವರನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದದರು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ದೀಪಕ್ ಸಾವಿನ ಬಗ್ಗೆ ಕೇಳಿದಾಗ, ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸಲು ಸಾಧ್ಯವಾಗಿಲ್ಲ. 

ಇದರಿಂದಾಗಿ ದೀಪಕ್ ತಾಯಿ ಪುಸ್ಬಾಬತಿ, ಸಹೋದರ ಶ್ರೀಕಾಂತ್ ಮತ್ತು ಸಹೋದರಿಯರಾದ ಲಿಲಿ, ಪಿಂಕಿ ಮತ್ತು ಬಂದಿತಾ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಫಿನಾಯಿಲ್ ಸೇವಿಸಿದ್ದಾರೆ. ನೆರೆಹೊರೆಯವರು ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಗಂಭೀರ ಸ್ಥಿತಿಯಲ್ಲಿದ್ದ ಲಿಲಿಯನ್ನು ವಿಮ್ಸಾರ್‌ಗೆ ವರ್ಗಾಯಿಸಲಾಯಿತು.

ಎಂಸಿಎಲ್‌ನ ನಿವೃತ್ತ ಉದ್ಯೋಗಿ ಮತ್ತು ಗಂಜಾಂ ಜಿಲ್ಲೆಯ ಅಸ್ಕಾ ನಿವಾಸಿಯಾದ ದೀಪಕ್ ಅವರ ತಂದೆ ಗೋಲಾಕ್ ಬಿಹಾರಿ ಬಿಸ್ವಾಲ್ ಅವರ ಸಾವಿನ ನಂತರ, 2016 ರಲ್ಲಿ ಕುಟುಂಬವು ಲಹಂದಾಬೂಡ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು ಚಿಕಿತ್ಸೆ ಪಡೆಯುತ್ತಿರುವ ದೀಪಕ್ ಅವರ ಸಹೋದರಿ ಬಂದಿತಾ  ಅವರಿಗೆ ತನ್ನ ಸಹೋದರನ ಮರಣದ ದುಃಖವನ್ನು ಸಹಿಸಲು ಸಾಧ್ಯವಾಗಲಿಲ್ಲ. “ನಮ್ಮ ತಂದೆ 2016 ರಲ್ಲಿ ನಿಧನರಾದ ನಂತರ ಇಡೀ ಕುಟುಂಬ ಸಂಕಷ್ಟದಲ್ಲಿತ್ತು. ದೀಪಕ್ ಸಾವು ನಮಗೆ ಆಘಾತವನ್ನುಂಟು ಮಾಡಿತು ಮತ್ತು ನಮ್ಮ ಜೀವನವನ್ನು ಕೊನೆಗೊಳಿಸಲು ನಾವು ನಿರ್ಧರಿಸಿದ್ದೆವು" ಅವರು ಹೇಳಿದ್ದಾರೆ. ಝಾರ್ಸುಗುಡ ಐಐಸಿ ಸಬಿತ್ರಿ ಬಾಲ್ ಅವರು ಪರಿಣಿತರ ತಂಡದೊಡನೆ ಪೋಲೀಸರೊಡನೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ. 

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಶವಪರೀಕ್ಷೆಯ ನಂತರ ದೀಪಕ್ ಅವರ ದೇಹವನ್ನು ಅವರ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

SCROLL FOR NEXT