ದೇಶ

ಅಮರನಾಥ ಯಾತ್ರೆ ಅವಧಿ ಕಡಿತಗೊಳಿಸುವ ಆಲೋಚನೆ ಇಲ್ಲ: ಅಮರನಾಥ ದೇಗುಲ ಮಂಡಳಿ

Shilpa D

ಅಮರನಾಥ ಯಾತ್ರೆ ಅವಧಿ ಕಡಿತಗೊಳಿಸುವ ಆಲೋಚನೆ ಇಲ್ಲ: ಅಮರನಾಥ ದೇಗುಲ ಮಂಡಳಿ
ಜಮ್ಮು: ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭಿಸಬೇಕೋ, ಬೇಡವೋ ಎಂಬ ಅಸ್ಪಷ್ಟತೆಯ ಮಧ್ಯೆ, ಅಮರನಾಥ ದೇಗುಲ ಮಂಡಳಿ ಶುಕ್ರವಾರ ಧಾರ್ಮಿಕ ಉತ್ಸಾಹದಿಂದ ‘ಪ್ರಥಮ ಪೂಜನ’ ನಡೆಸಿದೆ. 

ಅಮರನಾಥ ದೇಗುಲ ಮಂಡಳಿಯ ತಲಾಬ್ ಟಿಲ್ಲೊ ಮೂಲದ ಕಚೇರಿಯಲ್ಲಿ ಪೂಜೆಯನ್ನು ನಡೆಸಲಾಯಿತು. ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿಪುಲ್ ಪಾಠಕ್, ಹೆಚ್ಚುವರಿ ಸಿಇಒ ಅನೂಪ್ ಕುಮಾರ್ ಸೋನಿ, ರಾಜೇಶ್ ಗುಪ್ತಾ, ಕಾರ್ಯಕಾರಿ ಅಧ್ಯಕ್ಷ ವಿಎಚ್‌ಪಿ, ಸಂಜಯ್ ಬಾರು ಕೌನ್ಸಿಲರ್ ಮತ್ತು ಇತರರು ‘ಪೂಜನ್’ ನಲ್ಲಿ ಭಾಗವಹಿಸಿದ್ದರು.

"ಈ ಪೂಜೆಯನ್ನು ಪೂರ್ಣಿಮಾ ದಿನದಂದು ಯಾತ್ರೆಯ ಸಮಯದಲ್ಲಿ ಚಂದನ್ವಾರಿ -ಕಾಶ್ಮೀರ ದಲ್ಲಿ ವಾಡಿಕೆಯಂತೆ ನಡೆಸಲಾಗುತ್ತದೆ ಆದರೆ ಈ ವರ್ಷ ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಇಲ್ಲಿ ನಡೆಸಲಾಗುತ್ತಿದೆ" ಎಂದು ಪಾಠಕ್ ಮಾಧ್ಯಮಗಳಿಗೆ ತಿಳಿಸಿದರು. ಯಾತ್ರೆಗೆ ಸಿದ್ಧತೆಗಳು ನಡೆಯುತ್ತಿವೆ ಮತ್ತು ಈ 'ಪೂಜನ್' ಅದರ ಭಾಗವಾಗಿದೆ. ಇದಲ್ಲದೆ ಜೂನ್ 8 ರ ನಂತರ ಧಾರ್ಮಿಕ ಸ್ಥಳಗಳನ್ನು ತೆರೆಯಲಾಗುತ್ತಿದೆ ಮತ್ತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಇದು ಅಮರನಾಥ ಯಾತ್ರೆ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ಅವರು ಹೇಳಿದರು. . ”

ಆದಾಗ್ಯೂ, ತೀರ್ಥಯಾತ್ರೆಯ ಅವಧಿಯನ್ನು 15 ದಿನಗಳವರೆಗೆ ಕಡಿತಗೊಳಿಸುವ ವರದಿಯನ್ನು ನಿರಾಕರಿಸಿದ ಪಾಠಕ್, "ಸಿದ್ಧತೆಗಳು ಪ್ರಗತಿಯಲ್ಲಿವೆ ಮತ್ತು ಕೊರೋನಾ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದರು.

ಏತನ್ಮಧ್ಯೆ, ವಿಎಚ್‌ಪಿ ಕಾರ್ಯಕಾರಿ ಅಧ್ಯಕ್ಷ ರಾಜೇಶ್ ಗುಪ್ತಾ, “ಸಾಧ್ಯವಾದಷ್ಟು ಉತ್ತಮವಾದ ಸೌಲಭ್ಯಗಳನ್ನು ಒದಗಿಸಬೇಕೆಂದು ನಾವು ಭಾವಿಸುತ್ತೇವೆ ಮತ್ತು ಈ 'ಪ್ರಥಮ್ ಪೂಜನ್’ ನೊಂದಿಗೆ ಬಾಬಾ ಅಮರನಾಥ್ ಆಶೀರ್ವಾದದಿಂದ ಮತ್ತು ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ನಿಯಂತ್ರಣಕ್ಕೆ ಬಂದು, ತೀರ್ಥಯಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಪ್ರಾರಂಭವಾಗುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

SCROLL FOR NEXT