ದೇಶ

ಜೂ.10 ರಿಂದ ರಾಮ ಮಂದಿರ ಕಟ್ಟಡ ಕಾಮಗಾರಿ ಆರಂಭ

Srinivas Rao BV

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಜೂ.10 ರಂದು ಅಡಿಪಾಯ ಹಾಕಲು ಸಿದ್ಧತೆ ನಡೆದಿದ್ದು, ಅಂದಿನಿಂದ ಮಂದಿರ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ.

ಮಂದಿರ ಟ್ರಸ್ಟ್ ನ ಮುಖ್ಯಸ್ಥರ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ರಾಮ ಜನ್ಮಭೂಮಿ ಪ್ರದೇಶದಲ್ಲಿರುವ ಕುಬೀರ್ ತಿಲ ಮಂದಿರದಲ್ಲಿರುವ ಭಗವಾನ್ ಶಿವನಿಗೆ ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕ ಸಲ್ಲಿಸುವ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

ಭಗವಾನ್ ಶ್ರೀರಾಮನೂ ಸಹ ಲಂಕಾಧೀಶ ರಾವಣನ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದ ಎಂದು ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರ ವಕ್ತಾರರಾಗಿರುವ ಮಹಾಂತ್ ಕಮಲ್ ನಯನ ದಾಸ್.

ಕಟ್ಟಡ ನಿರ್ಮಾಣ ಕಾಮಗಾರಿಗೂ ಮುನ್ನ ಧಾರ್ಮಿಕ ಸಮಾರಂಭಗಳು ಎರಡು ಗಂಟೆಗಳ ಕಾಲ ನಡೆಯಲಿದೆ.

SCROLL FOR NEXT