ದೇಶ

ದೇಶಕ್ಕೆ ಅಕ್ರಮ ಪ್ರವೇಶ, ನಕಲಿ ದಾಖಲೆ ಮೂಲಕ ಆಧಾರ್, ಪಾಸ್ ಪೋರ್ಟ್ ಸಂಗ್ರಹ; ತೆಲಂಗಾಣದಲ್ಲಿ 5 ರೊಹಿಂಗ್ಯ ಮುಸ್ಲಿಮರ ಬಂಧನ

Srinivasamurthy VN

ಹೈದರಾಬಾದ್: ದೇಶಕ್ಕೆ ಅಕ್ರಮವಾಗಿ ನುಸುಳಿ, ನಕಲಿ ದಾಖಲೆಗಳ ಮೂಲಕ ಆಧಾರ್, ಪಾಸ್ ಪೋರ್ಟ್ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಐವರು ರೊಹಿಂಗ್ಯ ಮುಸ್ಲಿಮರ ಬಂಧಿಸಲಾಗಿದೆ.

ತೆಲಂಗಾಣದ ಝಹೀರಾಬಾದ್ ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರು ರೊಹಿಂಗ್ಯಾ ಮುಸ್ಲಿಮರನ್ನು ಬಂಧಿಸಿದ್ದಾರೆ. ಬಂಧಿತರಿಂದ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಸೇರಿದಂತೆ ಇತರೆ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಅಕ್ರಮ ಬಾಂಗ್ಲಾ ನಿವಾಸಿಗಳ ಕುರಿತು ಖಚಿತ ಮಾಹಿತಿ ಪಡೆದ ಝಹೀರಾಬಾದ್ ಪೊಲೀಸ್ ಇನ್ಸ್ ಪೆಕ್ಚರ್ ಸೈದೇಶ್ವರ್ ಅವರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮೂವರ ಮಹಿಳೆಯರೂ ಸೇರಿದಂತೆ ಐವರನ್ನು ವಿಚಾರಣೆಗೊಳಪಡಿಸಿದಾಗ ಅವರೆಲ್ಲರೂ ರೊಹಿಂಗ್ಯಾ ಮುಸ್ಲಿಮರು ಎಂದು ತಿಳಿದುಬಂದಿದೆ.

ಬಳಿಕ ಅವರ ದಾಖಲೆ ಪರಿಶೀಲಿಸಲಾಗಿದ್ದು, ನಕಲಿ ಮಾಹಿತಿ ನೀಡಿ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಪಡೆದಿರುವ ಸಂಗತಿ ಕೂಡ ಬಯಲಾಗಿದೆ. ಹೀಗಾಗಿ ದೇಶಕ್ಕೆ ಅಕ್ರಮ ಪ್ರವೇಶ ಮತ್ತು ವಂಚನೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT