ದೇಶ

ಡಿಎಂಕೆ ಶಾಸಕನಿಗೆ ಕೊರೋನಾ ಸೋಂಕು: ಆರೋಗ್ಯ ಸ್ಥಿತಿ ಗಂಭೀರ

Shilpa D

ಚೆನ್ನೈ:ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಡಿಎಂಕೆ ಶಾಸಕ ಜೆ ಅನ್ಬಳಗನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ತಿಳಿಸಿವೆ.

61 ವರ್ಷದ ಶಾಸಕರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಇಳಿದಿದ್ದು, ಎಂದು ಡಾ.ರೆಲಾ ಸಂಸ್ಥೆ ಮತ್ತು ವೈದ್ಯಕೀಯ ಕೇಂದ್ರ ತಿಳಿಸಿದೆ.

ಇಂದು ಸಂಜೆವರೆಗೊ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ, ಜೊತೆಗೆ ಅವರ ಹೃದಯದ ಆರೋಗ್ಯ ಕೂಡ ಸರಿಯಿಲ್ಲ, ರಕ್ತದೊತ್ತಡ ಸಮ ಪ್ರಮಾಣದಲ್ಲಿ ಸರಿದೂಗಿಸಲು ಮೆಡಿಸಿನ್ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಅವರಿಗೆ ಕಿಡ್ನಿ ಸಮಸ್ಯೆ ಕೂಡ ಇದೇ ಸಮಯದಲ್ಲಿ ಹೆಚ್ಚಾಗಿದೆ. ಪೂರ್ಣ ಪ್ರಮಾಣದಲ್ಲಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಆಸ್ಪತ್ರೆ ಸಿಇಓ ವಿವರಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಅನ್ಬಳಗನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

SCROLL FOR NEXT