ಸಂಗ್ರಹ ಚಿತ್ರ 
ದೇಶ

ತಾಯಿಗೆ ಹಿಂಸೆ ಕೊಡುತ್ತಿದ್ದ ತಂದೆಯನ್ನೇ ಕೊಂದು ಜೈಲು ಸೇರಿದ ಮಕ್ಕಳು!

ತಮ್ಮ ತಂದೆಯನ್ನು ಕೊಂದದ್ದಕ್ಕಾಗಿ ಇಬ್ಬರು ಯುವಕರು ಹಾಗೂ ಅವರ ತಾಯಿಯನ್ನು ಪೋಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ನಾಗಪಟ್ಟಣಂ: ತಮ್ಮ ತಂದೆಯನ್ನು ಕೊಂದದ್ದಕ್ಕಾಗಿ ಇಬ್ಬರು ಯುವಕರು ಹಾಗೂ ಅವರ ತಾಯಿಯನ್ನು ಪೋಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಾಯಿಯನ್ನು ಪದೇ ಪದೇ ಹಿಂಸಿಸುತ್ತಿದ್ದ, ಹೊಡೆಯುತ್ತಿದ್ದ ತಂದೆಯನ್ನು ತಾಯಿಯೊಡನೆ ಸೇರಿ ಇಬ್ಬರೂ ಯುವಕರು ಕೊಂದು ಸುಟ್ಟು ಹಾಕಿದ್ದು  ಅರ್ಧ ಸುಟ್ಟ ಮೃತದೇಹ ಸೋಮವಾರ ಪತ್ತೆಯಾಗಿತ್ತು.ತಿರುಮರುಗಲ್ ಬಳಿ ನಡೆದ ಘಟನೆಯಲ್ಲಿ ತಮಿಳುವನನ್ (55) ಕೊಲೆಯಾಗಿದ್ದಾನೆ. ಒಣಗಿದ ಕೆರೆ ಸಮೀಪ ಆತನ ಶವ ಪತ್ತೆಯಾಗಿದೆ.

ತಾಯಿಯನ್ನು ಹಿಂಸಿಸುತ್ತಿದ್ದ, ತಂದೆಯಿಂದ ಪ್ರತಿ ಬಾರಿ ತಾಯಿಯನ್ನು ರಕ್ಷಿಸುತ್ತಿದ್ದ ಆ ಇಬ್ಬರೂ ಯುವಕರು ಸೇರಿ ತಂದೆಯನ್ನು ಕೊಂದಿರುವುದು ತನಿಖೆಯಿಂದ ಬಯಲಾಗಿದೆ. 

ಮೂಲಗಳ ಪ್ರಕಾರ, ತಮಿಳುವನನ್ ಮತ್ತು  ಜಯಸುಥಾ (48) ಮದುವೆಯಾಗಿ ಸುಮಾರು 26 ವರ್ಷಗಳಾಗಿವೆ. ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ - ತಮಿಳುಸೆಲ್ವನ್ (25), ತವಸೀಲನ್ (19) ಮತ್ತು ಧನುಷ್ (16) ಇದಲ್ಲದೆ ಓರ್ವ ಮಗಳಿದ್ದಳು. ಇವರ ಪೈಕಿ ತಮಿಳುಸೆಲ್ವನ್ನಗರದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಇದೀಗ ಲಾಕ್ ಡೌಇನ್ ಇರುವ ಕಾರಣ ಊರಿಗೆ ಬಂದಿದ್ದನು.ಬಾರ್, ವೈನ್ ಶಾಪ್ ತೆರೆದ ನಂತರ ಮೃತ ತಮಿಳುವನನ್  ನಿತ್ಯವೂ ಕುಡಿಯಲು ಪ್ರಾರಂಭಿಸಿದ್ದ.  ಆಗಾಗ್ಗೆ ಮನೆಯಲ್ಲಿ ಇದರಿಂದ ಗಲಾಟೆಗಳು ನಡೆಯುತ್ತಿತ್ತು. ತಮಿಳುಸೆಲ್ವನ್ ಹಾಗೂ ತವಸೀಲನ್ ತಮ್ಮ ತಂದೆಯಈ ಕೃತ್ಯವನ್ನು ಖಂಡಿಸುತ್ತಿದ್ದರು.

ಜೂನ್ 6ರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ತಮಿಳುವನನ್ ಪತ್ನಿಗೆ ಕುಡುಗೋಲು ಬಳಸಿ ಹೊಡೆಯುತ್ತಿದ್ದ. ಆಗ ಮಕ್ಕಳಾದ ತಮಿಳುಸೆಲ್ವನ್ ಹಾಗೂ ತವಸೀಲನ್ ಕ್ರೋಧಿತರಾಗಿ ತಮ್ಮ ತಂದೆಯನ್ನು ಹೊಡೆದಿದ್ದಾರೆ. ಕುಡಗೋಲು ಕಸಿದುಕೊಂಡು ಆತನನ್ನು ಕೊಂದು ಹಾಕಿದ್ದಾರೆ. ಆ ಬಳಿಕ ಘಟನೆಯಿಂದ ಆಘಾತಹೊಂದಿದ ಕುಟುಂಬ ಮೃತ್ದೇಹದ ಅವಶೇಷಗಳನ್ನು ವಿಲೇವಾರಿ ಮಾಡಲು ನಿರ್ಧರಿಸಿದೆ. ಬಳಿಕ ಚಾಪೆಯೊಂದರಲ್ಲಿ ಶವವನ್ನು ಸುತ್ತಿ ಕಾಡಿಗೆ ಒಯ್ದು ಅಲ್ಲಿ ಅದನ್ನು ಸುಟ್ಟು ಹಾಕಿದ್ದಾರೆ.

ಕಾತುಮೂಲೈ ಬಳಿಯ ಕೆರೆಯೊಂದರ ಸಮೀಪ ಅರ್ಧ ಸುಟ್ಟ್ ಶವವೊಂದು ಸಿಕ್ಕಿದ ಪರಿಣಾಮ ದಾರಿಹೋಕರು ಸೋಮವಾರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ ತಿರುಪುಗಲೂರು ಗ್ರಾಮದಲ್ಲಿ ಜಯಸುಥಾ ಅವರ ಕುಟುಂಬದ ವ್ಯಕ್ತಿ ಕಾಣೆಯಾಗಿರುವುದು ಗುರುತಿಸಿದ ಪೋಲೀಸರು  ಪ್ರಶ್ನಿಸಿದಾಗ ಮಕ್ಕಳು ತಾವು ತಮ್ಮ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಸಧ್ಯ ತಾಯಿ ಹಾಗೂ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು ಮೃತದೇಹವನ್ನು ಶವಪರೀಕ್ಷೆಗಾಗಿ ನಾಗಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ