ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಇದೇ ಮೊದಲು, ಭಾರತದಲ್ಲಿ ಸಕ್ರಿಯ ಕೊರೋನಾ ಸಂಖ್ಯೆಯನ್ನು ಮೀರಿಸಿದ ಚೇತರಿಕೆ ಪ್ರಕರಣಗಳು!

ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ದೇಶದಲ್ಲಿ ಕೊರೋನಾ ವೇಗವಾಗಿ ಹರಡುತ್ತಿದ್ದು ಪ್ರತಿದಿನ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಲೇ ಇದ್ದು ಆತಂಕ ಸೃಷ್ಟಿಸಿತ್ತು. ಇದರ ನಡುವೆಯೇ ಗುಡ್ ನ್ಯೂಸ್ ಒಂದು ಬಂದಿದೆ.

ಸಂಗ್ರಹ ಚಿತ್ರ
Vishwanath S
Updated On : 10 Jun 2020, 3:44 pm

ನವದೆಹಲಿ: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ದೇಶದಲ್ಲಿ ಕೊರೋನಾ ವೇಗವಾಗಿ ಹರಡುತ್ತಿದ್ದು ಪ್ರತಿದಿನ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಲೇ ಇದ್ದು ಆತಂಕ ಸೃಷ್ಟಿಸಿತ್ತು. ಇದರ ನಡುವೆಯೇ ಗುಡ್ ನ್ಯೂಸ್ ಒಂದು ಬಂದಿದೆ. 

ಹೌದು ಇದೇ ಮೊದಲ ಬಾರಿಗೆ ಒಟ್ಟಾರೆ ಕೋವಿಡ್ ಸಕ್ರೀಯ ಪ್ರಕರಣಗಳನ್ನು ಮೀರಿಸಿ ಚೇತರಿಕೆ ಪ್ರಕರಣಗಳು ಹೊಸ ಭರವಸೆ ಮೂಡಿಸಿವೆ. 

ಭಾರತದಲ್ಲಿ ನಿನ್ನೆ ಒಂದೇ ದಿನ 9,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ಭಾರತದಲ್ಲಿ ಸಕ್ರಿಯಾ ಪ್ರಕರಣಗಳ ಸಂಖ್ಯೆ 1,33,632ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಚೇತರಿಕೆ ಸಂಖ್ಯೆ 1,35,205ಕ್ಕೆ ಏರಿಕೆಯಾಗಿದೆ. ಮಂಗಳವಾರ ಶೇಖಡ 48.99ರಷ್ಟು ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

Advertisement

Advertisement

ದೇಶದಲ್ಲಿ ಒಟ್ಟಾರೆ 2,76,583 ಮಂದಿಗೆ ತುತ್ತಾಗಿದ್ದರು. ಇನ್ನು ನಿನ್ನೆ 279 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 7,745ಕ್ಕೆ ಏರಿಕೆಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement