ದೇಶ

ಪಿಎಂ ಕೇರ್ಸ್ ಕುರಿತಾದ ಆರ್‌ಟಿಐ ಅರ್ಜಿ ಸಮರ್ಥನೀಯವಲ್ಲ: ಪಿಎಂಒ

Raghavendra Adiga

ನವದೆಹಲಿ: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಿಎಂ ಕೇರ್ಸ್ ನಿಧಿಯನ್ನು 'ಸಾರ್ವಜನಿಕ ಪ್ರಾಧಿಕಾರ' ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ಕುರಿತು ಪ್ರಧಾನಿ ಕಚೇರಿ (ಪಿಎಂಒ) ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ  ಮುಂದೆ ಪಿಎಂಒ ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಈ ಅರ್ಜಿಯನ್ನು ಏಕೆ ಪರಿಗಣಿಸಬಾರದೆಂಬ ಬಗ್ಗೆ  ವಿವರಿಸುವ ಪ್ರತಿಕ್ರಿಯೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದರ ಸಂಬಂಧ ಹೆಚ್ಚಿನ ವಿಚಾರಣೆ ಆಗಸ್ಟ್ 28 ರಂದು ನಡೆಯಲಿದೆ.

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಪಿಎಂಒ ಅವರ ಜೂನ್ 2 ರ ಆದೇಶವನ್ನು ಪ್ರಶ್ನಿಸಿ ಸಮ್ಯಕ್ ಗಂಗ್ವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್ ನಲ್ಲಿ ನಡೆಇದ್ತ್ತು.ಪಿಎಂ ಕೇರ್ಸ್ ಫಂಡ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ಕಾರಣಕ್ಕೆ  ಆರ್ಟಿಐ ಕಾಯ್ದೆಯಡಿಕೋರಿದ ದಾಖಲೆಗಳನ್ನು ನೀಡಲು ನಿರಾಕರಿಸಲಾಗಿತ್ತು.ಪಿಎಂಒ ಆರ್‌ಟಿಐ ಅರ್ಜಿಯಲ್ಲಿ ಅವರು ಬಯಸಿದಂತೆ ದಾಖಲೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಲು ಕೋರ್ಟಿಗೆ ಮನವಿ ಮಾಡಿತ್ತು.

ವಕೀಲರಾದ ಡೆಬೊಪ್ರಿಯೊ ಮೌಲಿಕ್ ಮತ್ತು ಆಯುಷ್ ಶ್ರೀವಾಸ್ತವ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಮಾರ್ಚ್ 28 ರಂದು ಪಿಎಂಒ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸುವ ಕ್ರಮವಾಗಿ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ಪರಿಹಾರದ ಹೆಸರಿನಲ್ಲಿತುರ್ತು ಪರಿಸ್ಥಿತಿಗಳ ನಿಧಿ ಪಿಎಂ ಕೇರ್ಸ್ ಹೆಸರಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ರಚಿಸುವುದಾಗಿ ಪ್ರಕಟಿಸಿದೆ ಕೋವಿಡ್ ನ ತೀವ್ರ ಆರೋಗ್ಯ ಹಾಗೂ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಎಂಒ ದೇಶದ ನಾಗರಿಕರಿಗೆ ಉದಾರವಾಗಿ ದೇಣಿಗೆ ನೀಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ, ಈ ನಿಧಿಯಲ್ಲಿನ ದೇಣಿಗೆಗಳು ಸಿಎಸ್ಆರ್ ಆಗಿ ಅರ್ಹತೆ ಪಡೆಯುತ್ತವೆ ಎಂದು ಅದು ಹೇಳಿದೆ ಮಾತ್ರವಲ್ಲದೆ ದೇಣಿಗೆಯ ಹಣ ತೆರಿಗೆ ವಿನಾಯಿತಿಗೆ ಸಹ ಒಳಪಡುತ್ತದೆ..

SCROLL FOR NEXT