ದೇಶ

ಪತ್ನಿಯನ್ನು ಕೊಂದು ನಿವೃತ್ತ ಪೊಲೀಸ್ ಅಧಿಕಾರಿ ಆತ್ಮಹತ್ಯೆ

Shilpa D

ತಿರುವನಂತಪುರ: ಪತ್ನಿಯನ್ನು ಕೊಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಾವು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ಪತಿ ಮತ್ತು ಪತ್ನಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿ ಪತ್ನಿ ಇಬ್ಬರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ನಿವೃತ್ತಿಯಾಗಿದ್ದರು. ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಎಲ್ಲಾ ಮುಗಿದಿತ್ತು, ನಾವು ಕೂಡಲೇ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಕರೆದೊಯ್ದವು, ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದರು,


ಪೊನ್ನಣ್ಣ ಮತ್ತು ಲೀಲಾ ಇಬ್ಬರು ಹೆಚ್ಚುವರಿ ಸಬ್ ಇನ್ ಸ್ಪೆಕ್ಟರ್ ಆಗಿದ್ದರು.  ಬೆಳಗ್ಗೆ ಜಗಳ ನಡೆದಿತ್ತು, ನಂತರ ಮರದ ತುಂಡಿನಿಂದ ಪತ್ನಿಯ ತಲೆಗೆ ಹೊಡೆದ ಪರಿಣಾಮ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಆಕೆ ಸಾವನ್ನಪ್ಪಿದ್ದನ್ನು ಕಂಡು ಪೊನ್ನಣ್ಣ ಕೂಡ ನೇಣಿಗೆ ಶರಣಾಗಿದ್ದಾರೆ.
 

SCROLL FOR NEXT