ದೇಶ

'ಕೋಕಾ ಕೋಲಾ, ಥಮ್ಸ್ ಅಪ್ ನಿಷೇಧಿಸಿ' ಎಂದು ಮನವಿ ಮಾಡಿದಾತನಿಗೆ 5 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

Raghavendra Adiga

ನವದೆಹಲಿ: ತಂಪು ಪಾನೀಯಗಳಾದ  ಕೋಕಾ ಕೋಲಾ ಮತ್ತು ಥಮ್ಸ್ ಅಪ್ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಕಾರಣ ಅದರ ಮಾರಾಟವವನ್ನು, ಬಳಕೆಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು ಅರ್ಜಿದಾರನಿಗೆ 5 ಲಕ್ಷ ರೂ. ದಂಡ ವಿಧಿಸಿದೆ.

ಸಾಮಾಜಿಕ ಕಾರ್ಯಕರ್ತ ಉಮೇದಿಶ್ ಪಿ. ಚಾವ್ಡಾ ಎನ್ನುವವರು ಕೋಕಾ ಕೋಲಾ, ಥಮ್ಸ್ ಅಪ್ ಪಾನೀಯಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲು ನಿರ್ದೇಶನಗಳನ್ನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಎರಡು ನಿರ್ದಿಷ್ಟ ಬ್ರಾಂಡ್‌ಗಳನ್ನು ಏಕೆ ನಿಷೇಧಿಸಬೇಕೆಂದು ಅರ್ಜಿದಾರರಿಗೆ ಸಹ ಸ್ಪಷ್ಟವಿಲ್ಲ ಎಂದು  ನ್ಯಾಯಾಲಯವು ಕಂಡುಕೊಂಡಿದೆ. 

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಅಜಯ್ ರಾಸ್ತೋಗಿ ಅವರನ್ನೊಳಗೊಂಡ ಪೀಠ "ನಾವು ಅರ್ಜಿಯನ್ನು ವಜಾಗೊಳಿಸಿದ್ದು ಅರ್ಜಿದಾರನ ಮೇಲೆ  5,00,000 ರೂ.  ದಂಡ ವಿಧಿಸುತ್ತೇವೆ. ಅರ್ಜಿಯಲ್ಲಿ ಹೇಳಿದಂತೆ ತಂಪು ಪಾನೀಯ ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ ಎನ್ನಲಾಗಿದೆ. ಆದರೆ ಇದು ಆ ಅರ್ಜಿದಾರನ ನಂಬಿಕೆಯೇ ಹೊರತು ಅದಕ್ಕೆ ಸೂಕ್ತ  ತಾಂತ್ರಿಕ ಆಧಾರವಿಲ್ಲ,ರ್ಜಿದಾರರ ಪ್ರತಿಪಾದನೆಯ ಮೂಲ ದೃಢಪಟ್ಟಿಲ್ಲ.ನಿರ್ದಿಷ್ಟವಾಗಿ ಎರಡು ಬ್ರಾಂಡ್‌ಗಳನ್ನು ಏಕೆ ವಿಷೇಧಿಸಬೇಕೆಂದು ಹೇಳಲಾಗಿದೆ?ಸರಿಯಾದ ಕಾರಣ ನೀಡದೆ ಇಂತಹಾ ಅರ್ಜಿ ಸಲ್ಲಿಸುತ್ತಿರುವುದು  ಆರ್ಟಿಕಲ್ 32 ರ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಆಹ್ವಾನಿಸುವುದುನ್ಯಾಯಾಂಗ  ಪ್ರಕ್ರಿಯೆಯ ದುರುಪಯೋಗವಾಗಿದೆ "ಎಂದು ನ್ಯಾಯಪೀಠ ಹೇಳಿದೆ.

ಈ ವಿಷಯದ ಬಗ್ಗೆ ಅರ್ಜಿದಾರರ ಪರ ರ ವಕೀಲರ ವಾದವನ್ನು ಕೇಳಿದ ನಂತರ, ಉನ್ನತ ನ್ಯಾಯಾಲಯವು ಈ ತೀರ್ಮಾನ ತೆಗೆದುಕೊಂಡಿದೆ. 

SCROLL FOR NEXT