ಜೆಸಿ ಪ್ರಭಾಕರ ರೆಡ್ಡಿ 
ದೇಶ

ನಕಲಿ ದಾಖಲೆ ಸೃಷ್ಟಿಸಿ ವಾಹನಗಳ ಮಾರಾಟ ಆರೋಪ: ಟಿಡಿಪಿ ಹಿರಿಯ ನಾಯಕ ಪ್ರಭಾಕರ್ ರೆಡ್ಡಿ, ಪುತ್ರ ಬಂಧನ

ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಬಿಎಸ್- ೪ ವಾಹನಗಳ ಹೆಸರಿನಲ್ಲಿ ಬಿಎಸ್ -೩ ವಾಹನಗಳ ಮಾರಾಟ ಮಾಡಿದ ಆರೋಪದ ಮೇಲೆ ಶನಿವಾರ ಪಕ್ಷದ ಹಿರಿಯ ನಾಯಕ ಜೆಸಿ ಪ್ರಭಾಕರ ರೆಡ್ಡಿ ಹಾಗೂ ಅವರ ಪುತ್ರ ಅಶ್ಮಿತ್ ರೆಡ್ಡಿ ಅವರನ್ನು ಬಂಜಾರ ಹಿಲ್ಸ್ ನಿವಾಸದಲ್ಲಿ ಬಂಧಿಸಿದ್ದಾರೆ. 

ಹೈದರಾಬಾದ್: ಇ ಎಸ್ ಐ ಹಗರಣಕ್ಕೆ ಸಂಬಂಧಿಸಿದಂತೆ ತೆಲುದೇಶಂ ಪಕ್ಷದ ಮಾಜಿ ಸಚಿವ ಅಚ್ಚನ್ನ ನಾಯ್ಡು ಬಂಧಿಸಿದ ದಿನದ ನಂತರ ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಬಿಎಸ್- ೪ ವಾಹನಗಳ ಹೆಸರಿನಲ್ಲಿ ಬಿಎಸ್ -೩ ವಾಹನಗಳ ಮಾರಾಟ ಮಾಡಿದ ಆರೋಪದ ಮೇಲೆ ಶನಿವಾರ ಪಕ್ಷದ ಹಿರಿಯ ನಾಯಕ ಜೆಸಿ ಪ್ರಭಾಕರ ರೆಡ್ಡಿ ಹಾಗೂ ಅವರ ಪುತ್ರ ಅಶ್ಮಿತ್ ರೆಡ್ಡಿ ಅವರನ್ನು ಬಂಜಾರ ಹಿಲ್ಸ್ ನಿವಾಸದಲ್ಲಿ ಬಂಧಿಸಿದ್ದಾರೆ. 

ಪ್ರಭಾಕರ ರೆಡ್ಡಿ, ಅವರ ಪುತ್ರನನ್ನು ಬಂಧಿಸಿದ ನಂತರ ಪೊಲೀಸರು ಮುಂದಿನ ಕ್ರಮಕ್ಕಾಗಿ ಅವರನ್ನು ಅನಂತಪುರಕ್ಕೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಎಸ್ -೩ ವಾಹನಗಳನ್ನು ಬಿಎಸ್ -೪ ವಾಹನಗಳೆಂದು ಮಾರಾಟ ಮಾಡಿದ್ದ ಆರೋಪದ ಮೇಲೆ ಟಿಡಿಪಿ ನಾಯಕನನ್ನು ಬಂಧಿಸಲಾಗಿದೆ. ಸುಮಾರು ೧೫೪ ವಾಹನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿಸಲಾಗಿದೆ ಎಂದು ದೂರಲಾಗಿದೆ.

ದಾಖಲೆಗಳನ್ನು ತಿರುಚಿದ ಹಾಗೂ ವಾಹನಗಳ ನೋಂದಣಿ ನಿಯಮಗಳನ್ನು ಬದಲಿಸಿದ ಆರೋಪಗಳನ್ನು ಸಹ ಹೊರಿಸಲಾಗಿದೆ.
ಅನಂತಪುರದಲ್ಲಿ ಎಲ್ಲ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡನಂತರ ಪ್ರಭಾಕರ ರೆಡ್ಡಿ ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಪ್ರಭಾಕರ್ ರೆಡ್ಡಿ ಹಿರಿಯ ಟಿಡಿಪಿ ನಾಯಕ ಹಾಗೂ ಮಾಜಿ ಸಂಸದ ಜೆ.ಸಿ. ದಿವಾಕರ್ ರೆಡ್ಡಿ ಕಿರಿಯ ಸಹೋದರನಾಗಿದ್ದು, ಈ ಇಬ್ಬರೂ ಸಹೋದರರು ತಮ್ಮ ಕುಟುಂಬದೊಂದಿಗೆ ಜೆಸಿ ಟ್ರಾವಲ್ಸ್ ಎಂಬ ಕಂಪನಿ ನಡೆಸುತ್ತಿದ್ದಾರೆ.

ಪ್ರಭಾಕರ ರೆಡ್ಡಿ ಹಾಗೂ ಆತನ ಪುತ್ರನ ಬಂಧನದ ನಂತರ ಆಂಧ್ರ ಪ್ರದೇಶದಾದ್ಯಂತ ಟಿಡಿಪಿ ಕಾರ್ಯಕರ್ತರು ಹಾಗೂ ನಾಯಕರಲ್ಲಿ ದಿಗ್ಬ್ರಮೆ ಉಂಟಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

ದಕ್ಷಿಣ ಕನ್ನಡ ಜಿಲ್ಲೆಗೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣದ ಪ್ರಸ್ತಾವನೆ: ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"