ದೇಶ

ಮಧ್ಯಪ್ರದೇಶ: ಶಿವ ದೇವಾಲಯಕ್ಕೆ ಸಂಪರ್ಕರಹಿತ ಗಂಟೆ ತಯಾರಿಸಿದ ಮುಸ್ಲಿಂ ಮೆಕ್ಯಾನಿಕ್ 

Srinivas Rao BV

ಹಿಂದೂ ದೇವಾಲಯಗಳಿಗೆ ಶಬ್ದರಹಿತ ಜನರೇಟರ್ ಗಳನ್ನು ತಯಾರಿಸಿಕೊಟ್ಟಿದ್ದ ಮುಸ್ಲಿಂ ಮೆಕಾನಿಕ್ ನಹ್ರು ಖಾನ್ ಮಧ್ಯಪ್ರದೇಶದ ಪ್ರಮುಖ ಶಿವ ದೇವಾಲಯಕ್ಕೆ ಸಂಪರ್ಕ ರಹಿತ (ಕಾಂಟ್ಯಾಕ್ಟ್ ಲೆಸ್) ಗಂಟೆಯನ್ನು ತಯಾರಿಸಿಕೊಟ್ಟಿದ್ದಾರೆ. 

ಲಾಕ್ ಡೌನ್ ನಂತರ ಕೋವಿಡ್-19 ಭೀತಿಯ ನಡುವೆಯೇ ದೇವಾಲಯಗಳು ತೆರೆದಿದ್ದು, ದೇವಾಲಯಗಳಲ್ಲಿ ಗಂಟೆಯನ್ನು ಭಾರಿಸುವಂತಿಲ್ಲ ಎಂಬ ನಿಬಂಧನೆ ವಿಧಿಸಲಾಗಿದೆ ಈ ಹಿನ್ನೆಲೆಯಲ್ಲಿ ಮುಟ್ಟದೆಯೇ ಗಂಟೆಯನ್ನು ಭಾರಿಸುವ ತಂತ್ರಜ್ಞಾನವನ್ನು 62 ವರ್ಷದ ನಹ್ರು ಖಾನ್ ತಯಾರಿಸಿಕೊಟ್ಟಿದ್ದಾರೆ. 

ಮಧ್ಯಪ್ರದೇಶದಲ್ಲಿರುವ ಪಶುಪತಿನಾಥ್ ದೇವಾಲಯಕ್ಕೆ ನಹ್ರು ಖಾನ್ ಈ ಕೊಡುಗೆ ನೀಡಿದ್ದು, ಗಂಟೆಗೆ ಎಲೆಕ್ಟ್ರಿಕ್ ಸೆನ್ಸಾರ್ ಅಳವಡಿಕೆ ಮಾಡಿದ್ದು, ಈ ಮೂಲಕ ಭಕ್ತಾದಿಗಳು ಮುಟ್ಟದೆಯೇ ಗಂಟೆಯನ್ನು ಭಾರಿಸಬಹುದಾಗಿದೆ. 

ಭಕ್ತಾದಿಗಳು ಗಂಟೆ ಇರುವ ಭಾಗದಿಂದ ಅರ್ಧ ಅಥವಾ ಒಂದು ಅಡಿಯಲ್ಲಿ ನಿಂತು ಕೈ ತೋರಿಸಿದರೂ ಸಹ ಗಂಟೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ. 

ನಮ್ಮ ದೇಶದ ಹೆಮ್ಮೆಯಾದ ವೈವಿಧ್ಯತೆಯನ್ನು ಗೌರವಿಸುವ ನಹ್ರು ಖಾನ್ ಅವರಿಂದ ಇದು ನಮ್ಮ ದೇವಾಲಯಕ್ಕೆ ಸಿಕ್ಕ ಅದ್ಭುತ ಉಡುಗೊರೆ ಎಂದ್ಮು ಪಶುಪತಿನಾಥ ದೇವಾಲಯದ ಮುಖ್ಯ ಅರ್ಚಕ ಕೈಲಾಶ್ ಪಂಡಿತ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಹ್ರು ಖಾನ್, ಮಸೀದಿಗಳಲ್ಲಿ ಆಜಾನ್ ನಡೆಯುತ್ತಿರಬೇಕಾದರೆ, ಗಂಟೆಗಳ ಸದ್ದಿಲ್ಲದೇ ಶಿವ ದೇವಾಲಯ ಇರಲು ಹೇಗೆ ಸಾಧ್ಯ? ಅದಕ್ಕಾಗಿಯೇ ಸಂಪರ್ಕ ರಹಿತವಾಗಿ ಗಂಟೆ ಭಾರಿಸುವ ವ್ಯವಸ್ಥೆ ಮಾಡುವ ಮನಸ್ಸಾಯಿತು, ಇದು ದೇವಾಲಯ ಹಾಗೂ ಭಕ್ತಾದಿಗಳಿಗೆ ನನ್ನ ಉಡುಗೊರೆ ಎಂದಿದ್ದಾರೆ.

ಮೂರನೇ ತರಗತಿಗೆ ಶಾಲೆ ಬಿಟ್ಟ ನಹ್ರು ಖಾನ್ ಕೊರೋನಾ ಅವಧಿಯಲ್ಲಿ ಸ್ಯಾನಿಟೈಜ್ ಮಾಡಲು ಯಂತ್ರ ತಯಾರಿಸುವಿಕೆ, ಹ್ಯೂಮನ್ ಸ್ಯಾನಿಟೈಸಿಂಗ್ ಮಷಿನ್, ದೇವಾಲಯಗಳಿಗೆ ಶಬ್ದ ರಹಿತ ಪವರ್ ಜನರೇಟರ್ ಗಳು ಸೇರಿದಂತೆ ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. 
 

SCROLL FOR NEXT