ದೇಶ

ಹುತಾತ್ಮನಾದ ವಾರ್ತೆಯಿಂದ ಶೋಕದಲ್ಲಿ ಮುಳುಗಿತ್ತು ಯೋಧನ ಕುಟುಂಬ, ಮರುಘಳಿಗೆ ಮಗನಿಂದಲೇ ಬಂತು ಕರೆ!

Srinivas Rao BV

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗ ಲಡಾಕ್ ನಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದ ಯೋಧ ಸುನಿಲ್ ರೈ ನ ಕುಟುಂಬ ಸದಸ್ಯರು ಅತೀವ ಸಂಕಟದಲ್ಲಿದ್ದರು. ಆದರೆ ಈ ಸುದ್ದಿ ಬಂದ ಕೆಲವೇ  ಘಳಿಗೆಯಲ್ಲಿ ಸ್ವತಃ ಯೋಧ ಸುನಿಲ್ ರೈ ಮನೆಗೆ ಕರೆ ಮಾಡಿದ್ದು ಆ ಕುಟುಂಬದ ಸಂತಸಕ್ಕೆ ಪಾರವೇ ಇರಲಿಲ್ಲ!

ಗಲ್ವಾನ್ ಕಣಿವೆಯಲ್ಲಿ ಚೀನಾ-ಭಾರತದ ಸೇನಾಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಮೃತಪಟ್ಟಿದ್ದು ಪಾಟ್ನಾದ ಸುನಿಲ್ ಕುಮಾರ್ ಆದರೆ ಗೊಂದಲ, ತಪ್ಪು ಮಾಹಿತಿಗಳಿಂದಾಗಿ ಬಿಹಾರದ ಸರಣ್ ಜಿಲ್ಲೆಯ ದಿಘ್ರಾ-ಪರ್ಸ ಗ್ರಾಮದಲ್ಲಿರುವ ಸುನಿಲ್ ರೈ ಅವರ ಕುಟುಂಬಕ್ಕೆ ಯೋಧ ಹುತಾತ್ಮ ವಾರ್ತೆ ತಲುಪಿತ್ತು. ಹುತಾತ್ಮರಾದ ಯೋಧ ಹಾಗೂ ವಾರ್ತೆ ತಲುಪಿದ ಮನೆಯ ಯೋಧ ಇಬ್ಬರ ಹೆಸರೂ ಒಂದೇ ಆಗಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ.

ಸುನಿಲ್ ರೈ ತಮ್ಮ ಮರಣ ವಾರ್ತೆ ಪ್ರಕಟಗೊಂಡಿರುವುದನ್ನು ತಾವೇ ಆನ್ ಲೈನ್ ಮೂಲಕ ನೋಡಿ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದು ತಮಗೆ ಸಂಬಂಧಿಸಿದಂತೆ ಆ ಸುದ್ದಿ ಸುಳ್ಳು ಎಂಬುದನ್ನು ತಿಳಿಸಿದ್ದಾರೆ. ಇದೇ ತಪ್ಪು ಮಾಹಿತಿ ಎಲ್ಲೆಡೆಯೂ ಪ್ರಕಟವಾಗಿದ್ದು, ಪ್ರಮುಖ ದೈನಿಕಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಇತರ ರಾಜಕಾರಣಿಗಳು ಸಹ ಸಂತಾಪ ಸೂಚಿಸಿದ್ದರು.

SCROLL FOR NEXT