ಭಾರತ-ಚೀನಾ ಮಿಲಿಟರಿ ಅಧಿಕಾರಿಗಳ ಮಧ್ಯೆ ಮತ್ತೊಂದು ಸುತ್ತಿನ ಮಾತುಕತೆ ವಿಫಲ, ಅನಿಶ್ಚಿತತೆಯಲ್ಲಿ ಮುಕ್ತಾಯ
ಕಳೆದ ಸೋಮವಾರ ರಾತ್ರಿ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿ ಚೀನಾದ ಕಡೆಯ ಸೈನಿಕರು ಸಹ ಅಪಾರ ಸಂಖ್ಯೆಯಲ್ಲಿ ಸಾವಿಗೀಡಾದ ನಂತರ ಭಾರತ ಸೇನೆಯ ಮೇಜರ್ ಜನರಲ್ ಚೀನಾದ ಮಿಲಿಟರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಅನಿಶ್ಚಿತತೆಯಲ್ಲಿಯೇ ಕೊನೆಗೊಂಡಿತು.
ನವದೆಹಲಿ:ಕಳೆದ ಸೋಮವಾರ ರಾತ್ರಿ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿ ಚೀನಾದ ಕಡೆಯ ಸೈನಿಕರು ಸಹ ಅಪಾರ ಸಂಖ್ಯೆಯಲ್ಲಿ ಸಾವಿಗೀಡಾದ ನಂತರ ಭಾರತ ಸೇನೆಯ ಮೇಜರ್ ಜನರಲ್ ಚೀನಾದ ಮಿಲಿಟರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಅನಿಶ್ಚಿತತೆಯಲ್ಲಿಯೇ ಕೊನೆಗೊಂಡಿತು.
ಇಂದಿನವರೆಗೂ ಚೀನಾ ಸೈನ್ಯಪಡೆಯನ್ನು ಹಿಂತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಕಳೆದ ಸೋಮವಾರ ಘರ್ಷಣೆ ನಡೆದ ಸ್ಥಳದಲ್ಲಿಯೇ ಮಾತುಕತೆ ನಡೆಯಿತು. ಈ ಪ್ರದೇಶ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಗೆ ಹತ್ತಿರವಾಗಿದೆ.
1962ರಲ್ಲಿ ಚೀನಾ ಭಾರತದ ಗಡಿ ಭಾಗವನ್ನು ಪ್ರವೇಶಿಸಿ ಬಂದು ಯುದ್ಧ ನಡೆದಿತ್ತು. ನಂತರ ಚೀನಾ ಈ ಪ್ರದೇ ತನಗೆ ಸೇರಿದ್ದು ಎಂದು ಆಗಾಗ ಪ್ರತಿಪಾದಿಸುತ್ತಾ ಬಂದಿರಲಿಲ್ಲ. ಆದರೆ ಇಂದು ಇಡೀ ಗಲ್ವಾನ್ ಪ್ರದೇಶ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿದೆ. ಇದುವೇ ಭಾರತ ಮತ್ತು ಚೀನಾ ನಡುವೆ ಸೇನಾ ನಿಯೋಜನೆ, ಸಂಘರ್ಷಕ್ಕೆ ಇಂದು ಕಾರಣವಾಗಿದೆ.
ನಿನ್ನೆ ಭಾರತದ ಮೇಜರ್ ಜನರಲ್ ಮತ್ತು ಚೀನಾದ ಮಿಲಿಟರಿ ಅಧಿಕಾರಿ ಮಧ್ಯೆ ನಡೆದ ಮತ್ತೊಂದು ಸುತ್ತಿನ ಮಾತುಕತೆ ಯಾವುದೇ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿ ಅನಿಶ್ಚಿತತೆಯಲ್ಲಿ ಮುಂದುವರಿದಿದೆ.