ಸಂಗ್ರಹ ಚಿತ್ರ 
ದೇಶ

ಚೀನಾ ಒಳನುಸುಳುವಿಕೆ ಹಿಂದಿನ ನಿಜಾಂಶ ಬಹಿರಂಗಪಡಿಸಲು ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ|

ಭಾರತದ ಭೂಪ್ರದೇಶಕ್ಕೆ ಚೀನಾ ಒಳನುಗ್ಗುವಿಕೆಯ ಹಿಂದಿನ ಸಂಗತಿಗಳನ್ನು ಪ್ರಧಾನಿ ಮೋದಿ ಮರೆಮಾಚಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಸತ್ಯವನ್ನು ಮರೆಮಾಚಿದ್ದಾದರೂ ಏಕೆ ಎಂದು ಜನರಿಗೆ ತಿಳಿಸುವಂತೆ ಒತ್ತಾಯಿಸಿದೆ. 

ನವದೆಹಲಿ: ಭಾರತದ ಭೂಪ್ರದೇಶಕ್ಕೆ ಚೀನಾ ಒಳನುಗ್ಗುವಿಕೆಯ ಹಿಂದಿನ ಸಂಗತಿಗಳನ್ನು ಪ್ರಧಾನಿ ಮೋದಿ ಮರೆಮಾಚಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಸತ್ಯವನ್ನು ಮರೆಮಾಚಿದ್ದಾದರೂ ಏಕೆ ಎಂದು ಜನರಿಗೆ ತಿಳಿಸುವಂತೆ ಒತ್ತಾಯಿಸಿದೆ. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ‘ನಮ್ಮ ಭೂಪ್ರದೇಶಕ್ಕೆ ಯಾವುದೇ ಯಾರೊಬ್ಬರೂ ಒಳನುಗ್ಗಿಲ್ಲ. ನಮ್ಮ ಶಿಬಿರಗಳನ್ನು ಯಾರೂ ವಶಕ್ಕೆ ತೆಗೆದುಕೊಂಡಿಲ್ಲ.’ ಎಂದು ನಿನ್ನೆ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಇದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿದೆ. ಆದ್ದರಿಂದಲೇ ಇದು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.  ಇಡೀ ಗಾಲ್ವಾನ್ ಕಣಿವೆ ತಮ್ಮದೇ ಆಗಿರುವುದರಿಂದ ತಾವು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿಲ್ಲ ಎಂದು ಚೀನಾ ಹೇಳಿದೆ ಎಂಬುದಾಗಿ ಸಿಬಲ್‍ ಗಮನಸೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!

ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಶ್ರೀಲಂಕಾ XI ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಸಿರಾಜ್; ಬ್ಯಾಟ್ ಪರೀಕ್ಷಿಸಿದ ಲಂಕನ್ನರು!

ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗಾಗಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್, video!

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

Toxic Trailer: ಹಿರೋಯಿನ್ ಎದುರು ಯಶ್ ಬೆತ್ತಲೆ ಸೀನ್ ನೋಡಿ ಅಭಿಮಾನಿಗಳು ದಂಗು; ಬಾಕ್ಸ್ ಆಫೀಸ್ ನಲ್ಲಿ 3000 ಕೋಟಿ ಫಿಕ್ಸ್ ಎಂದ ಫ್ಯಾನ್ಸ್!