ರಾಹುಲ್ ಗಾಂಧಿ(ಸಂಗ್ರಹ ಚಿತ್ರ) 
ದೇಶ

ನಿಮ್ಮ ಪ್ರಕಾರ ಮೋದಿಯವರು ಜನರಿಗೆ ಮಾತ್ರವಲ್ಲ, ದೇವರಿಗೂ ನಾಯಕರೇ?: ರಾಹುಲ್ ಗಾಂಧಿ ಟ್ವೀಟ್ ಗೆ ನಡ್ಡಾ ಕುಹಕ!

ಭಾರತದ ಪ್ರಾಂತ್ಯವನ್ನು ಚೀನಾಕ್ಕೆ ಒಪ್ಪಿಸುವ ಮೂಲಕ ಪ್ರಧಾನಿ ಮೋದಿ ಸರೆಂಡರ್ (ಶರಣಾಗತ ಮೋದಿ) ಮೋದಿ ಆಗಿದ್ದಾರೆ ಎಂದು ನಿನ್ನೆ ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.

ನವದೆಹಲಿ: ಭಾರತದ ಪ್ರಾಂತ್ಯವನ್ನು ಚೀನಾಕ್ಕೆ ಒಪ್ಪಿಸುವ ಮೂಲಕ ಪ್ರಧಾನಿ ಮೋದಿ ಸರೆಂಡರ್ (ಶರಣಾಗತ ಮೋದಿ) ಮೋದಿ ಆಗಿದ್ದಾರೆ ಎಂದು ನಿನ್ನೆ ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.

ನಿನ್ನೆಯಿಂದ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯವರ ಸರೆಂಡರ್ ಮೋದಿ ಟ್ವೀಟ್ ಟ್ರೆಂಡ್ ಆಗಿದೆ. ಇಂಗ್ಲಿಷ್ ಪದ surrender ಎಂಬುದನ್ನು ರಾಹುಲ್ ಗಾಂಧಿ Surender Modi ಎಂದು ಬರೆದು ಅಪಹಾಸ್ಯಕ್ಕೀಡಾಗಿದ್ದಾರೆ. ಮೊದಲು ನೀವು ಬರೆದಿರುವ ಶಬ್ದದ ಸ್ಪೆಲ್ಲಿಂಗ್ ನೋಡಿಕೊಳ್ಳಿ ಎಂದು ತಮಾಷೆ ಮಾಡಿದ್ದಾರೆ.

ಉತ್ತರ ಪ್ರದೇಶ ಜನ ಸಂವಾದ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ನರೇಂದ್ರ ಮೋದಿ ಸುರೇಂದರ್ ಮೋದಿ ಎಂದು ಹೇಳಿದ್ದೀರಿ, ಅದರ ಅರ್ಥ ಮೋದಿಯವರು ಕೇವಲ ಜನರಿಗೆ ಮಾತ್ರವಲ್ಲ, ದೇವರಿಗೂ ನಾಯಕರೇ ಎಂದು ಕೇಳಿದರು.

ಅಸ್ಸಾಂ ಸಚಿವ ಹೀಮಂತಾ ಬಿಸ್ವಾ ಶರ್ಮಾ, ರಾಹುಲ್ ಗಾಂಧಿ ಮೊದಲು ಇಂಗ್ಲಿಷ್ ಪದಗಳನ್ನು ಸರಿಯಾಗಿ ಬರೆಯುವುದನ್ನು ಕಲಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ. ಶರಣಾಗುವುದು ನೆಹರೂ-ಗಾಂಧಿ ಪರಿವಾರದ ಲಕ್ಷಣವೇ ಹೊರತು ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರದ್ದಲ್ಲ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ಕೆಂಡಾಮಂಡಲವಾಗಿರುವ ಬಿಜೆಪಿ, ಪ್ರಧಾನಿ ವಿರುದ್ಧ ಹಗರು ಮಾತುಗಳು ಸಲ್ಲ ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!