ದೇಶ

ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ಸ್ಥಾಪನೆ, ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ ಚೀನಾ! 

Srinivas Rao BV

ಲಡಾಖ್: ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಉದ್ಧಟತನ ಬಿಡದ ಚೀನಾ ಮಾತುಕತೆ ನಡುವೆಯೇ ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ.

ಫಿಂಗರ್ ಏರಿಯಾವೂ ಸೇರಿದಂತೆ ನಿರ್ಣಾಯಕ ಪ್ರದೇಶಗಳಲ್ಲಿ ಚೀನಾ ಹೆಚ್ಚು ಪ್ರದೇಶದೊಂದಿಗೆ ಹಾಗೂ ಹೆಚ್ಚು ನಿರ್ಮಾಣ ಕಾಮಗಾರಿ, ಸೇನಾ ನಿಯೋಜನೆ ಮಾಡುತ್ತಿದೆ. ಮೇ.4 ರಿಂದ ಈಶಾನ್ಯ ಲಡಾಖ್ ನಲ್ಲಿ ಎಲ್ಎಸಿಯ ಉದ್ದಕ್ಕೂ 10,000 ಸೇನಾ ಸಿಬ್ಬಂದಿಗಳ ನಿಯೋಜನೆ, ಬೃಹತ್ ಶಸ್ತ್ರಾಸ್ತ್ರಗಳು, ಡಿಫೆನ್ಸ್ ಬ್ಯಾಟರಿಗಳನ್ನು ಸ್ಥಾಪನೆ ಮಾಡಿದೆ.

ಪ್ಯಾಂಗಾಂಗ್ ತ್ಸೋ ನದಿಯ ಉದ್ದಕ್ಕೂ ಇರುವ ಫಿಂಗರ್ ಏರಿಯಾದ ಬಳಿ ಚೀನಾ ಸೇನಾ ಸಿಬ್ಬಂದಿಗಳ ನಿಯೋಜನೆ, ನಿರ್ಮಾಣ ಕಾಮಗಾರಿ ಸೇರಿದಂತೆ ತನ್ನ ಸೇನಾ ಚಟುವಟಿಕೆಗಳನ್ನು ಮುಂದುವರೆಸಿದೆ ಎಂದು ಎಎನ್ಐ ವರದಿ ಮೂಲಕ ತಿಳಿದುಬಂದಿದೆ.
ಭಾರತ ಫಿಂಗರ್ 8 ವರೆಗೂ ತನ್ನ ಹಕ್ಕು ಪ್ರತಿಪಾದನೆ ಮಾಡುತ್ತಿದೆ. ಆದರೆ ಇತ್ತೀಚಿನ ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಸೇನೆ ಭಾರತೀಯ ಗಸ್ತು ಸಿಬ್ಬಂದಿಗಳನ್ನು ಫಿಂಗರ್ 4 ನ್ನು ದಾಟಿ ಹೋಗದಂತೆ ನಿರ್ಬಂಧ ವಿಧಿಸುತ್ತಿದೆ.

ಚೀನಾ ಫಿಂಗರ್ ಏರಿಯಾಗಳಲ್ಲಿ ಹೊಸ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಕ್ರಮಣಕಾರಿಯಾಗಿ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಘರ್ಷಣೆಯ ಸಂದರ್ಭಗಳಲ್ಲಿ ಜೂ.15-16 ರಂದು ರಾತ್ರಿ ಪ್ಯಾಟ್ರೋಲಿಂಘ್ ಪಾಯಿಂಟ್ 14 ರಲ್ಲಿ ಭಾರತೀಯ ಸೇನೆ ಧ್ವಂಸಗೊಳಿಸಿದ್ದ ಚೀನಾದ ವೀಕ್ಷಣಾ ಪೋಸ್ಟ್ ಗಳು ಮತ್ತೆ ತಲೆ ಎತ್ತಿವೆ. ಭಾರತದ ಪಿಪಿ-15, ಪಿಪಿ-17, ಪಿಪಿ-17A ಬಳಿ ಚೀನಾ ವೀಕ್ಷಣಾ ಪೋಸ್ಟ್ ಗಳು ಇನ್ನೂ ಹಾಗೆಯೇ ಅಸ್ತಿತ್ವದಲ್ಲಿದೆ, ಇದು ಭಾರತದ ಗಸ್ತು ಪಾಯಿಂಟ್ ಗಳು ಹಾಗೂ ಭಾರತದ ಕಡೆಗೆ ತನ್ನ ಸಿಬ್ಬಂದಿಗಳನ್ನು ಕಳಿಸುವುದಕ್ಕೆ ಸಹಕಾರಿಯಾಗಲಿದೆ.

SCROLL FOR NEXT