ದೇಶ

ಕೇರಳಕ್ಕೆ ಮತ್ತೆ ಕೊರೋನಾ ಆಘಾತ: ಒಂದೇ ದಿನ 152 ಸೋಂಕು ಪ್ರಕರಣ ದಾಖಲು

Srinivasamurthy VN

ಕೊಚ್ಚಿನ್: ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಿದ್ದ ಕೇರಳದಲ್ಲಿ ಮತ್ತೆ ಕೊರೋನಾ ವೈರಸ್ ತನ್ನ ಆರ್ಭಟ ಶುರು ಮಾಡಿದ್ದು ನಿನ್ನೆ ಒಂದೇ ದಿನ ಕೇರಳದಲ್ಲಿ 152 ಹೊಸ ಸೋಂಕು ಪ್ರಕರಣ ದಾಖಲಾಗಿವೆ.

ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದು, ನಿನ್ನೆ ಒಂದೇ ದಿನ ಕೇರಳದಲ್ಲಿ 152 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 98 ಮಂದಿ ಸೋಂಕಿತರು ವಿದೇಶಗಳಿಂಗ ರಾಜ್ಯಕ್ಕೆ ಆಗಮಿಸಿದವರಾಗಿದ್ದು, 46 ಮಂದಿ ಸೋಂಕಿತರು ಇತರೆ ರಾಜ್ಯಗಳಿಂದ ಬಂದವರಾಗಿದ್ದಾರೆ. ಅಂತೆಯೇ ಕೇರಳದಲ್ಲಿ ಪ್ರಸ್ತುತ ದಾಖಲಾಗಿರುವ ಒಟ್ಟಾರೆ ಸೋಂಕಿತರ ಪೈಕಿ ಶೇ.90ರಷ್ಚು ಸೋಂಕಿತರು ಇತರೆ ರಾಜ್ಯಗಳಿಂದ ಬಂದವರಾಗಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.

ಕೇರಳದಲ್ಲಿ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಶೂನ್ಯವಾದ ಬಳಿಕ ಮತ್ತೆ ಕೊರೋನಾ ವೈರಸ್ ಈ ರಾಜ್ಯದಲ್ಲಿ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದೆ. ನಿನ್ನೆ ಕೇರಳದಲ್ಲಿ 152 ಸೋಂಕು ಪ್ರಕರಣ ದಾಖಲಾಗಿದ್ದು, ಆ ಮೂಲಕ ಕೇರಳದಲ್ಲಿ ಸತತ 6ನೇ ದಿನ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಅಂತೆಯೇ ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3603ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1691 ಸಕ್ರಿಯ ಪ್ರಕರಣಗಳಿವೆ ಎಂದು ಪಿಣರಾಯಿ ವಿಜಯನ್ ಹೇಳಿದರು.

SCROLL FOR NEXT