ಸಾಂದರ್ಭಿಕ ಚಿತ್ರ 
ದೇಶ

ರಾಜೀವ್ ಗಾಂಧಿ ಫೌಂಡೇಶನ್ ಗೆ ಕಾಂಗ್ರೆಸ್ ಚೀನಾದಿಂದ ಹಣ ಪಡೆದಿತ್ತು: ವಿರೋಧ ಪಕ್ಷ ವಿರುದ್ಧ ಬಿಜೆಪಿಯ ಹೊಸ ದಾಳಿ

ಭಾರತ ಚೀನಾಕ್ಕೆ ಶರಣಾಗುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸುತ್ತಿದ್ದಂತೆ ಬಿಜೆಪಿ ಅದಕ್ಕೆ ತೀಕ್ಷ್ಮವಾಗಿ ತಿರುಗೇಟು ನೀಡುತ್ತಿದೆ. ಕಾಂಗ್ರೆಸ್ ಗೆ ಚೀನಾದಿಂದ ಹಣ ಪೂರೈಕೆಯಾಗಿದೆ ಎಂದು ನೇರವಾಗಿ ಬಿಜೆಪಿ ಆರೋಪಿಸಿದೆ. ಭಾರತದಲ್ಲಿರುವ ಚೀನಾ ರಾಯಭಾರಿ ಮೂಲಕ ರಾಜೀವ್ ಗಾಂಧಿ ಫೌಂಡೇಶನ್ ಗೆ ಹಣ ಪೂರೈಕೆಯಾಗಿದೆ, ಅದು 2005-06ರಲ್ಲಿ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ: ಭಾರತ ಚೀನಾಕ್ಕೆ ಶರಣಾಗುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸುತ್ತಿದ್ದಂತೆ ಬಿಜೆಪಿ ಅದಕ್ಕೆ ತೀಕ್ಷ್ಮವಾಗಿ ತಿರುಗೇಟು ನೀಡುತ್ತಿದೆ. ಕಾಂಗ್ರೆಸ್ ಗೆ ಚೀನಾದಿಂದ ಹಣ ಪೂರೈಕೆಯಾಗಿದೆ ಎಂದು ನೇರವಾಗಿ ಬಿಜೆಪಿ ಆರೋಪಿಸಿದೆ. ಭಾರತದಲ್ಲಿರುವ ಚೀನಾ ರಾಯಭಾರಿ ಮೂಲಕ ರಾಜೀವ್ ಗಾಂಧಿ ಫೌಂಡೇಶನ್ ಗೆ ಹಣ ಪೂರೈಕೆಯಾಗಿದೆ, ಅದು 2005-06ರಲ್ಲಿ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀವ್ ಗಾಂಧಿ ಫೌಂಡೇಶನ್ ಗೆ ಸಹ ಅಧ್ಯಕ್ಷೆಯಾಗಿದ್ದು ಮಂಡಳಿಯಲ್ಲಿ ಡಾ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪಿ ಚಿದಂಬರಂ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ.

2005-06ರ ವಾರ್ಷಿಕ ವರದಿ ಪ್ರಕಾರ ಚೀನಾದ ಪೀಪಲ್ಸ್ ರಿಪಬ್ಲಿಕ್ ರಾಯಭಾರಿ ಮೂಲಕ ರಾಜೀವ್ ಗಾಂಧಿ ಫೌಂಡೇಶನ್ ಹಣ ಪಡೆದಿದೆ. ಸಾಮಾನ್ಯ ದಾನಿಗಳ ಪಟ್ಟಿಯಲ್ಲಿ ಹಣವನ್ನು ನೀಡಲಾಗಿದೆ. ಅಂದರೆ ಅಂದಿನ ಯುಪಿಎ ಸರ್ಕಾರ ಚೀನಾದಿಂದ ಲಂಚ ಪಡೆದಿತ್ತೆ?,ಈ ಹಣ ಪಡೆದ ನಂತರ ಚೀನಾ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಫೌಂಡೇಶನ್ ಶಿಫಾರಸು ಮಾಡಿದ್ದು ಸತ್ಯವಲ್ಲವೇ, ಚೀನಾ ಪರವಾಗಿ ಅಂದು ಭಾರತ ಸರ್ಕಾರ ಮಾತನಾಡಿತ್ತು ಎಂದು ಕಾನೂನು ವ್ಯವಹಾರಗಳ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಸರ್ಕಾರದ ದಾಖಲೆಗಳಲ್ಲಿ ಈ ಕೊಡುಗೆ ಬಗ್ಗೆ ಎಲ್ಲೂ ನಮೂದಿಸಿಲ್ಲ. ಚೀನಾ ರಾಯಭಾರಿ ಮೂಲಕ ಈ ಹಣ ಪಡೆದಿದ್ದರೆ ಅದನ್ನು ಯಾವುದಕ್ಕೆ, ಹೇಗೆ ಬಳಸಿದ್ದರು ಎಂಬ ಬಗ್ಗೆ ಚೀನಾ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ, ಗಡಿ ವಿವಾದವನ್ನು, ಕೊರೋನಾ ಸೋಂಕಿನ ವಿಷಯಗಳನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಮಾಡುತ್ತಿರುವ ಕುತಂತ್ರವಿದು ಎಂದು ಹೇಳುತ್ತಿದೆ. ಚೀನಾದಿಂದ ಹಣವನ್ನು ಪಾರದರ್ಶಕವಾಗಿ ತೆಗೆದುಕೊಳ್ಳಲಾಗಿದೆ,  ಎಲ್ಲಾ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕಿದ್ದೇವೆ. ಫೌಂಡೇಶನ್ ನ ವಾರ್ಷಿಕ ವರದಿಯಲ್ಲಿ ಕೂಡ ಇದೆ. ಸರ್ಕಾರದ ಪರ ಫೌಂಡೇಶನ್ ಗಳಾದ ಉದಾಹರಣೆಗೆ ವಿವೇಕಾನಂದ ಫೌಂಡೇಶನ್ ಸಹ ವಿವಿಧ ಮೂಲಗಳಿಂದ ಹಣ ಸ್ವೀಕರಿಸಿದೆ, ಅದರರ್ಥ ದೇಶ ವಿರೋಧಿಗಳೆಂದು ಅಲ್ಲ ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT