ದೇಶ

ಮಹಾರಾಷ್ಟ್ರ: 1.5 ಲಕ್ಷ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ, ಕ್ಷೌರದಂಗಡಿ, ಸಲೂನ್ ಜೂ.28ಕ್ಕೆ ತೆರೆಯಲು ಅನುಮತಿ

Sumana Upadhyaya

ಮುಂಬೈ: ದೇಶದಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಎಣಿಕೆಗೆ ಸಿಗದಷ್ಟು ವ್ಯಾಪಿಸುತ್ತಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷದ 47 ಸಾವಿರದ 741 ಇದ್ದು, 4 ಸಾವಿರದ 841 ಹೊಸ ಕೇಸುಗಳು ಪತ್ತೆಯಾಗಿವೆ, ಇದುವರೆಗೆ ರಾಜ್ಯದಲ್ಲಿ 6 ಸಾವಿರದ 931 ಮಂದಿ ಕೊರೋನಾಕ್ಕೆ ಬಲಿಯಾಗಿದ್ದು 77 ಸಾವಿರದ 453 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 63 ಸಾವಿರದ 342 ಸಕ್ರಿಯ ಕೇಸುಗಳಿವೆ. ಇದುವರೆಗೆ ರಾಜ್ಯದಲ್ಲಿ 8 ಲಕ್ಷದ 48 ಸಾವಿರದ 26 ಮಂದಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ.

ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೂಡ ಮಹಾರಾಷ್ಟ್ರ ಸರ್ಕಾರ ಕ್ಷೌರದಂಗಡಿ, ಸಲೂನ್ ಮತ್ತು ಬ್ಯೂಟಿ ಪಾರ್ಲರ್ ಗಳನ್ನು ನಾಡಿದ್ದು ಭಾನುವಾರದಿಂದ ತೆರೆಯಲು ಅನುಮತಿ ನೀಡಿದೆ. ಆದರೆ ಗ್ರಾಹಕರ ಪ್ರವೇಶಕ್ಕೆ ಮಿತಿ ಹೇರಿದ್ದು ಮೊದಲೇ ಬುಕ್ಕಿಂಗ್ ಮಾಡಿ ಇಲ್ಲಿಗೆ ಗ್ರಾಹಕರು ಹೋಗಬೇಕಾಗುತ್ತದೆ.

SCROLL FOR NEXT