ಸಂಗ್ರಹ ಚಿತ್ರ 
ದೇಶ

ಭೂತಾನ್ ಜೊತೆ ಯಾವುದೇ ಸಂಘರ್ಷವಿಲ್ಲ: ಅಸ್ಸಾಂ ಸರ್ಕಾರ

ಭೂತಾನ್ ಜೊತೆ ಯಾವುದೇ ರೀತಿಯ ಸಂಘರ್ಷವಿಲ್ಲ ಎಂದು ಅಸ್ಸಾಂ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ದಿಸ್ಪುರ್: ಭೂತಾನ್ ಜೊತೆ ಯಾವುದೇ ರೀತಿಯ ಸಂಘರ್ಷವಿಲ್ಲ ಎಂದು ಅಸ್ಸಾಂ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಸ್ಸಾಂ ಸರ್ಕಾರ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣಾ ಅವರು, ಭೂತಾನ್ ಸರ್ಕಾರ ಅಸ್ಸಾಂಗೆ ಕುಡಿಯುವ ನೀರು ಬಂದ್ ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಭೂತಾನ್ ನಿಂದ ಅಸ್ಸಾಂಗೆ ಹರಿಯುವ ನೀರಾವರಿ ನೀರಿನ ಕಾಲುವೆಗಳಲ್ಲಿ ಕಲ್ಲುಗಳು ತುಂಬಿದ್ದು, ಇದರಿಂದ ನೀರಿನ ಹರಿವು ನಿಂತಿದೆ. ಈ ಕಲ್ಲುಗಳನ್ನು ತೆರವು ಮಾಡುವಂತೆ ಭೂತಾನ್ ಸರ್ಕಾರ ಸಲಹೆ ನೀಡಿದೆ. ಈ ಕುರಿತಂತೆ ಅಸ್ಸಾಂ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಕಾಲುವೆಗಳಲ್ಲಿರುವ ಕಲ್ಲುಗಳನ್ನು ತೆಗೆದು ನೀರಿನ ಸುಗಮ ಹಿರಿವಿಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಭೂತಾನ್ ದೇಶ ಗಡಿ ಹಂಚಿಕೊಂಡಿದೆ. ಹೀಗಾಗಿ ಉಭಯ ದೇಶಗಳ ನಡುವೆ ನದಿ ನೀರಿನ ಕಾಲುವೆ ಇದ್ದು, ಭೂತಾನ್ ನಿಂದ ಅಸ್ಸಾಂಗೆ ನೀರು ಹರಿಯುತ್ತದೆ. ಈ ಕಾಲುವೆಗಳಲ್ಲಿ ನೀರಿನ ಹರಿವು ನಿಂತಿದೆ ನಿಜ. ಆದರೆ ಭೂತಾನ್ ಸರ್ಕಾರ ಉದ್ದೇಶಪೂರ್ವಕವಾಗಿ ನೀರು ನಿಲ್ಲಿಸಿಲ್ಲ. ಬದಲಿಗೆ ಕಾಲುವೆಗಳಲ್ಲಿರುವ ಕಲ್ಲುಗಳಿಂದಾಗಿ ನೀರಿನ ಹರಿವು ನಂತಿದೆ. ಈ ಬಗ್ಗೆ ಭೂತಾನ್ ಸರ್ಕಾರ ನಮ್ಮೊಂದಿಗೆ ಚರ್ಚಿಸಿದೆ. ಶೀಘ್ರದಲ್ಲೇ ಕಾಲುವೆಗಳಲ್ಲಿರುವ ಕಲ್ಲುಗಳನ್ನು ತೆಗೆದು ಸುಗಮ ನೀರಿನ ಹರಿವಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಅಲ್ಲದೆ ಈ ಕುರಿತ ಮಾಧ್ಯಮಗಳ ಸುದ್ದಿಗಳಲ್ಲಿ ಹುರುಳಿಲ್ಲ. ಭಾರತ ಮತ್ತು ಭೂತಾನ್ ನಡುವಿನ ಬಾಂಧ್ಯವ್ಯ ಉತ್ತಮವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿ ಮಾಡಿರುವ ಈ ಕಪೋಲಕಲ್ಪಿತ ಸುದ್ದಿಗಳು ಭೂತಾನ್ ಮತ್ತು ಅಸ್ಸಾಂ ನಡುವಿನ ಸ್ನೇಹಮಯ ಸಂಬಂಧಕ್ಕೆ ತೊಡಕಾಗುತ್ತವೆ ಎಂದು ಎಂದು ಕುಮಾರ್ ಸಂಜಯ್ ಕೃಷ್ಣಾ ಆತಂಕ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಬೆಂಗಳೂರು ಜಾತ್ರೆಗೆ ಡೇಟ್‌ ಫಿಕ್ಸ್‌; 10 ದಿನಗಳ ಊರ ಹಬ್ಬಕ್ಕೆ ಉದ್ಯಾನನಗರಿ ಸಜ್ಜು, ಏನೆಲ್ಲಾ ಇರಲಿದೆ? ಇಲ್ಲಿದೆ ವಿವರ...

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?