ದೇಶ

ಕೊರೋನಾ ಔಷಧಿ ಘೋಷಣೆ: ಬಾಬಾ ರಾಮ್ ದೇವ್, ಆಚಾರ್ಯ ಬಾಲಕೃಷ್ಣ ವಿರುದ್ಧ ಎಫ್‍ಐಆರ್

Lingaraj Badiger

ಜೈಪುರ್:  ಮಹಾಮಾರಿ ಕೊರೋನಾ ವೈರಸ್ ಗೆ ತಮ್ಮ ಕಂಪನಿ ಔಷಧಿ ಕಂಡು ಹಿಡಿದಿದೆ ಎಂದು ಘೋಷಿಸಿಕೊಂಡಿದ್ದ ಯೋಗ ಗುರು ಬಾಬಾ ರಾಮ್‍ದೇವ್ ಮತ್ತು ಅವರ ಪತಂಜಲಿ ಕಂಪನಿಯ ಸಿಇಒ ಆಚಾರ್ಯ ಬಾಲಕೃಷ್ಣ ಸೇರಿದಂತೆ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಶುಕ್ರವಾರ ರಾಮ್ ದೇವ್ ಹಾಗೂ ಇತರರ ವಿರುದ್ಧ ಜೈಪುರದ ಜ್ಯೋತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ರಾಮ್ ದೇವ್, ಆಚಾರ್ಯ ಬಾಲಕೃಷ್ಣ, ಆನುರಾಗ್ ವರ್ಷಣೆ, ನಿಮ್ಸ್ ಬಲಬೀರ್ ಸಿಂಗ್ ತೋಮರ್ ಹಾಗೂ ಅನುರಾತ್ ತೋಮರ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅವಿನಾಶ್ ಪರಶರ್ ಅವರು ಹೇಳಿದ್ದಾರೆ.

ಸಾಮಾನ್ಯ ಸೋಂಕು ನಿಯಂತ್ರಣದ ಔಷಧಿಯನ್ನು ಕೊರೋನಾ ಔಷಧಿ ಎಂದು ಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂಬ ಆರೋಪದ ಮೇಲೆ ಈ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೋವಿಡ್-19 ಚಿಕಿತ್ಸೆಗೆ ಪತಂಜಲಿ ಅಯುರ್ವೇದ ಸಂಸ್ಥೆ ಕೊರೊನಿಲ್ ಔಷಧಿಯನ್ನು ಅಭಿವೃದ್ಧಿಗೊಳಿಸಿರುವುದಾಗಿ ಮಂಗಳವಾರವಷ್ಟೇ ಘೋಷಿಸಿತ್ತು.

SCROLL FOR NEXT