ದೇಶ

ಲಡಾಖ್ ಗಡಿ ವಿವಾದ: ಕಂಪನಿ ಟಿ- ಶರ್ಟ್ ಸುಟ್ಟು ಪ್ರತಿಭಟನೆ ನಡೆಸಿದ ಜೊಮ್ಯಾಟೊ ನೌಕರರು

Nagaraja AB

ಕೊಲ್ಕತ್ತಾ: ಕಳೆದ ವಾರ ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.ಈ ಘಟನೆಯನ್ನು ಖಂಡಿಸಿ ಜೊಮ್ಯಾಟೊ ಕಂಪನಿ ನೌಕರರು ತಮ್ಮ ಕಂಪನಿಯ ಟಿ- ಶರ್ಟ್ ಸುಟ್ಟು ಹಾಕುವ ಮೂಲಕ ಪ್ರತಿಭಟಿಸಿದ್ದಾರೆ.

ಬೆಹಾಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲ ಪ್ರತಿಭಟನಾಕಾರರು, ನೌಕರಿ ತೊರೆಯುವುದಾಗಿ  ಹೇಳಿದರು.ಜಿಮ್ಯಾಟೊ ಮೂಲಕ ಆಹಾರಕ್ಕೆ ಆರ್ಡರ್ ಮಾಡುವುದನ್ನು ಜನರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

2018ರಲ್ಲಿ ಚೀನಾದ ಪ್ರಮುಖ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ನ ಅಂಗವಾದ ಆಂಟ್ ಫಿನಾಶ್ಯಿಯಲ್ ಜೊಮ್ಯಾಟೊ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ನಡೆಸಿತ್ತು.ಇತ್ತೀಚಿಗೆ ಆಂಟ್ ಫಿನಾಶ್ಯಿಯಲ್ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ದೇಶದಲ್ಲಿ ಲಾಭ ಗಳಿಸುತ್ತಿರುವ ಚೀನಾ ಕಂಪನಿಗಳು ನಮ್ಮ ದೇಶದ ಸೈನಿಕರ ಮೇಲೆ ದಾಳಿ ಮಾಡುತ್ತಿವೆ. ನಮ್ಮ ಭೂಮಿಯನ್ನು 
ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT