ಭೋಪಾಲ್: ಮಧ್ಯ ಪ್ರದೇಶದಲ್ಲಿ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ರೈಲಿನ ಲೋಕೋ ಪೈಲಟ್ ಗಳು ಸಿಲುಕಿಕೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಕನಿಷ್ಠ ಇಬ್ಬರು ರೈಲುಗಳು ಮಧ್ಯೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಕಲ್ಲಿದ್ದಲು ಹೊತ್ತೊಯ್ಯುತ್ತಿದ್ದ ಎನ್ಟಿಪಿಸಿ(National Thermal Power Corporation) ರೈಲುಗಳು ಸಿಂಗ್ರಾವ್ಲೀ ಬಳಿ ಪರಸ್ಪರ ಡಿಕ್ಕಿ ಹಡೆದಿವೆ.
ಪರಿಣಾಮ ರೈಲಿನ ಬೋಗಿಗಳು ಟ್ರ್ಯಾಕ್ನಿಂದ ಪಕ್ಕಕ್ಕೆ ಉರುಳಿಬಿದ್ದಿವೆ. ಲೋಕೋ ಪೈಲಟ್ ಹಾಗೂ ಸಹಾಯಕ ಲೋಕೋ ಪೈಲಟ್ ರೈಲುಗಳ ಮಧ್ಯೆ ಸಿಲುಕಿರುವ ಶಂಕೆಯಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಎನ್ಟಿಪಿಸಿ ಅಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.