ದೇಶ

ಪಂಜಾಬ್ ನಲ್ಲಿ 607 ಕೋಟಿ ರೂಪಾಯಿ ಮೌಲ್ಯದ ಗೋಧಿಗೆ ಹಾನಿ!

Srinivas Rao BV

ಪಂಜಾಬ್: ಪಂಜಾಬ್ ನಲ್ಲಿ 607 ಕೋಟಿ ರೂಪಾಯಿ ಮೌಲ್ಯದ ಗೋಧಿ ಹಾನಿಗೊಳಗಾಗಿರುವುದು ಸಿಎಜಿ ಮೂಲಕ ಬಹಿರಂಗಗೊಂಡಿದೆ. 

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಪ್ರಮಾಣದ ಗೋಧಿ ಹಾನಿಗೊಳಗಾಗಿದ್ದು, ಸಂಬಂಧಪಟ್ಟ ಸಿಎಜಿ ವರದಿಯನ್ನು ಕಳೆದ ವಾರ ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲಾಯಿತು. 

ಗೋಧಿಯನ್ನು ಅಸಮರ್ಪಕ, ಸೂಕ್ತವಲ್ಲದ ರೀತಿಯಲ್ಲಿ ಹಾಗೂ ಹೊಸ ಗೋಧಿಯನ್ನು ಹಳೆಯ, ಹಾನಿಗೊಳಗಾದ ಗೋಧಿಯ ಜೊತೆಗೆ ದಾಸ್ತಾನು ಮಾಡಿದ್ದರ ಪರಿಣಾಮವಾಗಿ ಈ ಪ್ರಮಾಣದ ಹಾನಿ ಸಂಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

2014-15 ಹಾಗೂ 2017-18 ರ ಅವಧಿಯಲ್ಲಿ 2.83 ಲಕ್ಷ ಟನ್ ಗಳಷ್ಟು ಗೋಧಿಯನ್ನು ಹಾನಿಗೊಳಗಾಗಿದೆ ಎಂದು ಘೋಷಿಸಲಾಗಿತ್ತು. ರಾಜ್ಯ ದಾಸ್ತಾನು ಏಜೆನ್ಸಿಗಳಾದ ಪಂಜಾಬ್ ಆಗ್ರೋ ಫುಡ್ ಗ್ರೈನ್ಸ್ ಕಾರ್ಪೊರೇಷನ್ ಹಾಗೂ ಪಂಜಾಬ್ ಸ್ಟೇಟ್ ವೇರ್ ಹೌಸ್ ಕಾರ್ಪೊರೇಷನ್ ಗಳು ಇನ್ನೂ ಸಹ ಅಸಮರ್ಪಕ ಗೋಧಿ ದಾಸ್ತಾನನ್ನು ಮುಂದುವರೆಸಿವೆ, ಬದಲಾವಣೆ ಮಾಡಿಲ್ಲ ಎಂದು ಲೆಕ್ಕಪರಿಶೋಧನ ವರದಿಯಲ್ಲಿ ತಿಳಿಸಲಾಗಿದೆ. 

SCROLL FOR NEXT