ಬೃಂದಾ ಕಾರಟ್ 
ದೇಶ

ದೆಹಲಿ ಹಿಂಸಾಚಾರದಲ್ಲಿ ಬಂಧಿತರ ಹೆಸರನ್ನು ಬಹಿರಂಗಪಡಿಸಿ: ಬೃಂದಾ ಕಾರಟ್‌ ಒತ್ತಾಯ

ಈಶಾನ್ಯ ದೆಹಲಿಯಲ್ಲಿ ಉಂಟಾದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ವಶಕ್ಕೆ ಪಡೆದವರ ಮಾಹಿತಿಯನ್ನು ಬಹಿರಂಗಪಡಿಸಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಬೇಕು ಎಂದು ದಿಲ್ಲಿಯ ಪೊಲೀಸ್ ಆಯುಕ್ತರಿಗೆ ಸಿಪಿಐ(ಎಂ)ನ ಪಾಲಿಟ್‌ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಪತ್ರ ಬರೆದು ಒತ್ತಾಯಿಸಿದ್ದಾರೆ.

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಉಂಟಾದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ವಶಕ್ಕೆ ಪಡೆದವರ ಮಾಹಿತಿಯನ್ನು ಬಹಿರಂಗಪಡಿಸಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಬೇಕು ಎಂದು ದಿಲ್ಲಿಯ ಪೊಲೀಸ್ ಆಯುಕ್ತರಿಗೆ ಸಿಪಿಐ(ಎಂ)ನ ಪಾಲಿಟ್‌ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತು ಬರೆದ ಪತ್ರದಲ್ಲಿ ಅವರು, “148 ಎಫ್‌ಐ.ಆರ್‌ ಗಳನ್ನು ದಾಖಲಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ ಎಂದು ಪ್ರತಿಕಾ ವರದಿಗಳು ಹೇಳುತ್ತವೆ. ಈ ಹಿಂಸಾಚಾರದಲ್ಲಿ ಸತ್ತವರ ಮತ್ತು ಗಾಯಗೊಂಡವರ ಹಲವು ಕುಟುಂಬಗಳನ್ನು ನಾನು ಭೇಟಿ ಮಾಡಿದ್ದೇನೆ. ಅವರಿಗೆ ತಾವಾಗಿ ಎಫ್‌ಐಆರ್ ಸಲ್ಲಿಸಲು ಆಗಿಲ್ಲ,  ಅಥವಾ ಅವರ ಮೇಲೆ ಮಾಡಿದ ಹಲ್ಲೆಗಳನ್ನು ಕುರಿತಂತೆ ಯಾವುದೇ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಪೊಲೀಸರು ಮಾಹಿತಿಯನ್ನೂ ಕೊಟ್ಟಿಲ್ಲ ಎಂದು ಕಾರಟ್ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಪ್ರಕಾರ, ಎಲ್ಲ ಜಿಲ್ಲೆಗಳಲ್ಲಿ ಒಂದು ಪೊಲೀಸ್ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು, ಬಂಧಿಸಲ್ಪಟ್ಟವರ ಹೆಸರು ಮತ್ತು ವಿಳಾಸಗಳನ್ನು ಹಾಗೂ ಬಂಧಿಸಿದ ಪೋಲಿಸ್ ಅಧಿಕಾರಿ ಹೆಸರು ಮತ್ತು ಹುದ್ದೆಯನ್ನು ಬಹಿರಂಗಪಡಿಸಬೇಕು. ರಾಜ್ಯ ಮಟ್ಟದಲ್ಲಿ ಪೊಲೀಸ್ ಮುಖ್ಯಾಲಯದ ಕಂಟ್ರೋಲ್ ರೂಂ ಕಾಲಕಾಲಕ್ಕೆ (ಬಂಧಿತರು,ಅಪರಾಧದ ಸ್ವರೂಪದ) ವಿವರಗಳನ್ನು ಪಡೆಯಬೇಕು ಮತ್ತು ಸಾರ್ವಜನಿಕರ ಮಹಿತಿಗೆ ಒಂದು ಡಾಟಾಬೇಸ್ ಇಡಬೇಕಾಗುತ್ತದೆ. ಅದರಂತೆ ಪೊಲೀಸ್ ಇಲಾಖೆ ಇನ್ನೂನಡೆದುಕೊಂಡಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ಕಾನೂನು ಸ್ಫುಟವಾಗಿ ತಿಳಿಸಿದ್ದರೂ ಬಂಧಿಸಿರುವ ಎಲ್ಲ ವ್ಯಕ್ತಿಗಳ ಹೆಸರು ಮತ್ತು ವಿಳಾಸಗಳನ್ನು ಪೊಲೀಸ್ ಕಂಟ್ರೋಲ್ ರೂಂನಲ್ಲಿ ಪ್ರದರ್ಶಿಸಿಲ್ಲ. ಅಷ್ಟೇ ಅಲ್ಲ, ಸಂಬಂಧಪಟ್ಟ ಪ್ರತಿ ಪೊಲೀಸ್ ಠಾಣೆಗಳಲ್ಲೂ ಪ್ರದರ್ಶಿಸುತ್ತಿಲ್ಲ. ಈಗ ನಡೆದಿರುವ ಘಟನೆಗಳಿಂದಾಗಿ ಮತ್ತು ಈಗಿರುವ ಪರಿಸ್ಥಿತಿಗಳಿಂದಾಗಿ, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಅಗತ್ಯವನ್ನು ತಾವು ಒಪ್ಪುತ್ತೀರಿ ಎಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ಕಾರಟ್ ಹೇಳಿದ್ದಾರೆ.

ಕಾನೂನು ವಿಧಿಸಿರುವುದನ್ನು ಪಾಲಿಸುವುದು ಎಲ್ಲ ಬಾಧಿತರ ಬದುಕುಗಳನ್ನು ಪೀಡಿಸುತ್ತಿರುವ ಊಹಾಪೋಹಗಳು ಮತ್ತು ಸುಳ್ಳು ಮಾಹಿತಿಗಳನ್ನು ನಿವಾರಿಸುವಲ್ಲಿ ಬಹಳಷ್ಟು ಸಹಾಯಕವಾಗುತ್ತದೆ. ಈ ಕಾನೂನಾತ್ಮಕ ಅಗತ್ಯವನ್ನು ಪಾಲಿಸುವಂತೆ ಖಾತ್ರಿಪಡಿಸಬೇಕು ಮತ್ತು ಈ ಪ್ರದೇಶದಲ್ಲಿ ಸಾಮಾನ್ಯ ಸ್ಥಿತಿ ಮತ್ತೆ ನೆಲೆಸುವಂತೆ ಮಾಡುವತ್ತ ಗಮನಹರಿಸಬೇಕು ಎಂದು ತಮ್ಮ ಪತ್ರದಲ್ಲಿ ದಿಲ್ಲಿ ಪೋಲೀಸ್ ಕಮಿಷನರ್‌ ಅವರನ್ನು ಕಾರಟ್‌ ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT