ದೇಶ

'ಸ್ಪೂರ್ತಿ ತುಂಬುವ ಮಾದರಿ ಮಹಿಳೆಯರಿಗೆ ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಒಂದು ದಿನ ಮೀಸಲು': ಪಿಎಂ ಮೋದಿ 

Sumana Upadhyaya

ನವದೆಹಲಿ: ಸಮಾಜದ ಜನರಿಗೆ ಸ್ಪೂರ್ತಿ, ಉತ್ತೇಜನ ನೀಡುವ ಮಹಿಳೆಯರ ಕಥೆಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.


ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಈ ಬಾರಿ ಮಹಿಳಾ ದಿನಾಚರಣೆ ಪ್ರಯುಕ್ತ ನನ್ನ ಸೋಷಿಯಲ್ ಮೀಡಿಯಾ ಖಾತೆಗಳನ್ನು ತಮ್ಮ ಜೀವನ ಮತ್ತು ಸಾಧನೆಗಳ ಮೂಲಕ ಸ್ಪೂರ್ತಿ, ಉತ್ತೇಜನ ನೀಡುವ ಮಹಿಳೆಯರಿಗೆ ನೀಡುತ್ತೇನೆ, ಅಂತವರು ತಮ್ಮ ಜೀವನಗಾಥೆಗಳನ್ನು ಹಂಚಿಕೊಳ್ಳಬಹುದು.ಬೇರೆಯವರು ಕೂಡ ಇಂತಹ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಮಹಿಳೆಯರ ಬಗ್ಗೆ ಬರೆಯಬಹುದು, ಇದರಿಂದ ಲಕ್ಷಾಂತರ, ಕೋಟ್ಯಂತರ ಮಹಿಳೆಯರಿಗೆ ಉತ್ತೇಜನ ಸಿಕ್ಕಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.


ಇಂತಹ ಮಹಿಳೆಯರ ಸಾಧನೆಗಳನ್ನು ಹ್ಯಾಶ್ ಟಾಗ್ #sheInspiresUs ಎಂದು ಬರೆದು ಟ್ವೀಟ್ ಮಾಡಿ ಎಂದು ಹೇಳಿದ್ದಾರೆ.


ಈ ಮೂಲಕ ಪ್ರಧಾನಿ ಮೋದಿಯವರು ನಿನ್ನೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಾಕಿದ್ದ ಒಂದು ಪೋಸ್ಟ್ ನ ಬಗ್ಗೆ ಇದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಈ ಭಾನುವಾರ ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ನ್ನು ಬಿಟ್ಟುಬಿಡುವ ಬಗ್ಗೆ ಯೋಚಿಸುತ್ತೇನೆ, ನೀವೆಲ್ಲರೂ ಅಲ್ಲಿ ಪೋಸ್ಟ್ ಮಾಡಬಹುದು ಎಂದು ಹೇಳಿ ನಿನ್ನೆ ಪ್ರಧಾನಿಯವರು ಸ್ಟೇಟಸ್ ಹಾಕಿದ್ದರು.ಅವರು ಹಾಗೆ ಹಾಕಿದ ಒಂದೇ ಗಂಟೆಯಲ್ಲಿ ಅದು 26 ಸಾವಿರ ಸಲ ರಿಟ್ವೀಟ್ ಆಗಿ ಭಾರೀ ವೈರಲ್ ಆಗಿತ್ತು. 

SCROLL FOR NEXT