ನರೋತ್ತನ್ ಮಿಶ್ರಾ 
ದೇಶ

ಸರ್ಕಾರ ಉರುಳಿಸಲು 'ಕೈ' ಶಾಸಕರಿಗೆ ಬರೋಬ್ಬರಿ 100 ಕೋಟಿ ಆಫರ್, ವಿಡಿಯೋ ವೈರಲ್!

ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರಿಗೆ ಬರೋಬ್ಬರಿ 100 ಕೋಟಿ ರುಪಾಯಿ ಮತ್ತು ಸಚಿವ ಸ್ಥಾನದ ಆಫರ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದೋರ್: ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರಿಗೆ ಬರೋಬ್ಬರಿ 100 ಕೋಟಿ ರುಪಾಯಿ ಮತ್ತು ಸಚಿವ ಸ್ಥಾನದ ಆಫರ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಹುಕೋಟಿ ವ್ಯಾಪಂ ಹಗರಣದವನ್ನು ಜಗಜ್ಜಾಹೀರ್ ಮಾಡಿದ್ದ ವ್ಯಕ್ತಿಯೇ ಕುಟುಕು ಕಾರ್ಯಾಚರಣೆ ನಡೆಸಿ ಉದ್ದೇಶಿತ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಬಿಜೆಪಿಯ ಹಿರಿಯ ಮುಖಂಡ ನರೋತ್ತಮ್ ಮಿಶ್ರಾ ಅವರು ಕಾಂಗ್ರೆಸ್ ಶಾಸಕರಿಗೆ ಕಮಲ್ ನಾಥ್ ನೇತೃತ್ವದ ಸರ್ಕಾರವನ್ನು ಉರುಳಿಸುವಂತೆ ಕೋಟಿ ಕೋಟಿ ಆಫರ್ ನೀಡುತ್ತಿದ್ದಾರೆ ಎನ್ನುವ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಡಾ. ಆನಂದ್ ರೈ ಎಂಬುವರು ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು ವಿಡಿಯೋ ಕೆಳಗೆ ಕುದುರೆ ವ್ಯಾಪಾರ: ಬಿಜೆಪಿ ಬಣ್ಣ ಬಯಲು ಎಂದು ಬರೆದುಕೊಂಡಿದ್ದಾರೆ. 

ಇನ್ನು ಈ ವಿಡಿಯೋ ಸತ್ಯಾಸತ್ಯತೇ ಅಧಿಕೃತವಾಗಿಲ್ಲ. ಸದ್ಯ ಮಧ್ಯಪ್ರದೇಶದಲ್ಲಿ ಕೆಲ ಕಾಂಗ್ರೆಸ್ ಶಾಸಕರು ನಾಪತ್ತೆಯಾಗಿದ್ದು ಕುದುರೆ ವ್ಯಾಪರಕ್ಕೆ ಈ ವಿಡಿಯೋ ಪುಷ್ಠಿ ಕೊಡುವಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!