ಸಿಎಎ ವಿರೋಧಿ ಪ್ರತಿಭಟನೆಗೆ ಪ್ರಚೋದನೆ: ಐಸಿಸ್‌ ನಂಟು ಹೊಂದಿದ್ದ ದಂಪತಿ ಬಂಧನ 
ದೇಶ

ಸಿಎಎ ವಿರೋಧಿ ಪ್ರತಿಭಟನೆಗೆ ಪ್ರಚೋದನೆ: ಐಸಿಸ್‌ ನಂಟು ಹೊಂದಿದ್ದ ದಂಪತಿ ಬಂಧನ 

ಇತ್ತೀಚಿನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇಬ್ಬರು ಶಂಕಿತ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಭಯೋತ್ಪಾದಕರನ್ನು ದೆಹಲಿ ಪೋಲೀಸರು ಓಖ್ಲಾದಲ್ಲಿ ಬಂಧಿಸಿದ್ದಾರೆ. ಈ ಮಧ್ಯೆ ಈ ಜೋಡಿ  ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

ನವದೆಹಲಿ: ಇತ್ತೀಚಿನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇಬ್ಬರು ಶಂಕಿತ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಭಯೋತ್ಪಾದಕರನ್ನು ದೆಹಲಿ ಪೋಲೀಸರು ಓಖ್ಲಾದಲ್ಲಿ ಬಂಧಿಸಿದ್ದಾರೆ. ಈ ಮಧ್ಯೆ ಈ ಜೋಡಿ  ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

ಶ್ರೀನಗರದ ಜಹನ್‌ಜೈಬ್ ಸಾಮಿ ಮತ್ತು ಅವರ ಪತ್ನಿ ಹಿನಾ ಬಶೀರ್ ಬೀಘ್  ಬಂಧಿತರು.ದೆಹಲಿಯ ವಿಶೇಷ ಸೆಲ್ ಇವರನ್ನು ವಶಕ್ಕೆ ಪಡೆದಿದ್ದು ಬಂಧಿತರ ಬಳಿ ಇದ್ದ ಜಿಹಾದಿ ಚಿಂತನೆಯನ್ನು ಉತ್ತೇಜಿಸುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಕೋಶ) ಪ್ರಮೋದ್ ಸಿಂಗ್ ಕುಶ್ವಾಹಾ ತಿಳಿಸಿದ್ದಾರೆ. 

"ಓಖ್ಲಾದಜಾಮಿಯಾ ನಗರದಿಂದ ಐಸಿಸ್‌ನ ಖೊರಾಸನ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದ್ದ ಜಹಂಜೇಬ್ ಸಾಮಿ ಮತ್ತು ಹಿನಾ ಬಶೀರ್ ದಂಪತಿಗಳನ್ನು ಬಂಧಿಸಲಾಗಿದೆ. ಈ ದಂಪತಿಗಳು ಸಿಎಎ ವಿರೋಧಿ ಪ್ರತಿಭಟನೆಯನ್ನು ಪ್ರಚೋದಿಸುತ್ತಿದ್ದಾರೆ"  ಕುಶ್ವಾಹಾ ಹೇಳೀದ್ದಾರೆ.

ಸೈಬರ್‌ಪೇಸ್‌ನಲ್ಲಿನ ಚಟುವಟಿಕೆಗಳಿಂದಾಗಿ ಸಾಮಿ ತೀವ್ರ ನಿಗಾಗೆ ಒಳಪಟ್ಟಿದ್ದ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ, ಇದು ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸುವ ಉದ್ದೇಶವನ್ನು ಬಹಿರಂಗಪಡಿಸಿದೆ. ಅವರು "ಅಫ್ಘಾನಿಸ್ತಾನದ ಹಿರಿಯ ಐಎಸ್ಕೆಪಿ ಸದಸ್ಯರೊಂದಿಗೆ ಒಡನಾಟದಲ್ಲಿದ್ದರು". ಈ ಮೊದಲು ಅವರು ಖುರಾಸನ್ ಮೂಲದ ಹುಜೈಫಾ ಬಕಿಸ್ತಾನಿಯೊಂದಿಗೆ ಸಂಪರ್ಕ ಹೊಂದಿದ್ದರು ಸಿಎಎ ಕಾಯ್ದೆ ವಿರೋಧಿಸಿ ಭಾರತೀಯ ಮುಸ್ಲಿಮರನ್ನು ಪ್ರಚೋದಿಸುವ  ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಜಹನ್‌ಜೈಬ್ ಸಾಮಿ ತನ್ನ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಿಎಎ ವಿರುದ್ಧ ತನ್ನ ಯೋಜಿತ ಚಟುವಟಿಕೆಗಳಿಗಾಗಿ ಬಂದೂಕು ಮತ್ತು ಮದ್ದುಗುಂಡುಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಸಾಮಿ ಬಹಿರಂಗಪಡಿಸಿದ. 2020 ರ ಫೆಬ್ರವರಿಯಲ್ಲಿ ಇತ್ತೀಚೆಗೆ ಪ್ರಕಟವಾದ ಐಎಸ್ ನಿಯತಕಾಲಿಕೆ 'ಸಾತ್ ಅಲ್-ಹಿಂದ್' (ವಾಯ್ಸ್ ಆಫ್ ಇಂಡಿಯಾ) ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಸಾಮಿ ಪೊಲೀಸರಿಗೆ ತಿಳಿಸಿದ್ದಾರೆ.

ಸಾಮಿ ಅವರ ಆಪ್ತರಾದ ಖಟ್ಟಾಬ್ ವಾಸ್ತವವಾಗಿ ಅಬ್ದುಲ್ಲಾ ಬಸಿತ್ ಆಗಿದ್ದು, ಅತ ರು ಪ್ರಸ್ತುತ ಐಎಸ್ಐಎಸ್ ಸಂಬಂಧಿತ ಪ್ರಕರಣಗಳಲ್ಲಿ ವಿಚಾರಣೆಯಾಗಿ ತಿಹಾರ್ ಜೈಲಿನಲ್ಲಿದ್ದಾನೆ. ಏತನ್ಮಧ್ಯೆ, ಸಾಮಿ ಪತ್ನಿ ಹಿನಾ ಅವರು ಕ್ಯಾಟಿಜಾ ಅಲ್ ಕಾಶ್ಮೀರಿ / ಹನ್ನಾಬೀ ಹೆಸರಿನಲ್ಲಿ ಐಎಸ್ ಪರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದರು ಮತ್ತು ಸೈಬರ್‌ಪೇಸ್‌ನಲ್ಲಿ ಪ್ರತಿಭೆಗಳನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT