ಮಕ್ಕಳ ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಮತ್ತು ಪ್ರಧಾನಿ ಮೋದಿ 
ದೇಶ

ಬೇಡಿಕೆ ಆಲಿಸದ ನಿಮ್ಮ ಆಹ್ವಾನ ನನಗೆ ಬೇಡ: ಪ್ರಧಾನಿ ಮೋದಿ ಮಹಿಳಾ ದಿನಾಚರಣೆ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ

ಭಾರತದ ಪ್ರಧಾನಿ ಅವರ ನೋಡಲು, ಅವರ ಭೇಟಿಗಾಗಿ ಇಡೀ ದೇಶವೇ ಕಾಯುತ್ತಿರುತ್ತದೆ. ಆದರೆ ಕೇವಲ 8 ವರ್ಷದ ಬಾಲಕಿಯೊಬ್ಬಳು ಖುದ್ಧು ಪ್ರಧಾನಿ ಮೋದಿ ಅವರೇ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾಳೆ.

ನವದೆಹಲಿ: ಭಾರತದ ಪ್ರಧಾನಿ ಅವರ ನೋಡಲು, ಅವರ ಭೇಟಿಗಾಗಿ ಇಡೀ ದೇಶವೇ ಕಾಯುತ್ತಿರುತ್ತದೆ. ಆದರೆ ಕೇವಲ 8 ವರ್ಷದ ಬಾಲಕಿಯೊಬ್ಬಳು ಖುದ್ಧು ಪ್ರಧಾನಿ ಮೋದಿ ಅವರೇ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾಳೆ.

ಹೌದು.. ಮಣಿಪುರ ಮೂಲದ ಮಕ್ಕಳ ಪರಿಸರ ಕಾರ್ಯಕರ್ತೆ ಮತ್ತು ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್, ಪ್ರಧಾನಿ ನರೇಂದ್ರ ಮೋದಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಲಿಸಿಪ್ರಿಯಾ ಕಂಗುಜಮ್, 'ಮೋದಿಯವರೇ ನೀವು ಆರಂಭಿಸಿರುವ ಶೀ ಇನ್‌ಸ್ಪೈರ್ಸ್ ಯೂ ಅಭಿಯಾನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಭೂಮಿ ರಕ್ಷಣೆ ಕುರಿತ ನನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕೆಲಸಗಳನ್ನು ಸಂಭ್ರಮಿಸಬೇಡಿ. ನಿಮ್ಮ ಈ ಗೌರವವನ್ನು ನಾನು ನಿರಾಕರಿಸುತ್ತಿದ್ದೇನೆ. ನಿಮ್ಮ ಕಿವುಡ, ಮೂಕ, ಮತ್ತು ನೇತ್ರಹೀನ ಸಂಸದರಿಗೆ ನಮ್ಮ ಸಮಸ್ಯೆಗಳು ನಮ್ಮ ಕೂಗು ಕಾಣುವುದಿಲ್ಲ. ಸರ್ಕಾರದ ಆಡಳಿತ ಕೂಡ ಸಂಸದರಿಗಿಂತ ಹೆಚ್ಚು ಬಿನ್ನವಾಗಿ ಏನೂ ಇಲ್ಲ. ಇದು ಸಂಪೂರ್ಣ ವೈಫಲ್ಯ. ಕೊನೆ ಪಕ್ಷ ಈಗಲಾದರೂ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾಳೆ.

ಇನ್ನು ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದ ನಿರ್ವಹಿಸುವಂತೆ ಮತ್ತು ತಮ್ಮ ಶೀ ಇನ್‌ಸ್ಪೈರ್ಸ್ ಯೂ  #SheInspiresUs ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಹಿಳಾ ಸಾಧಕಿಯರಿಗೆ ಆಹ್ವಾನ ನೀಡಿದ್ದರು. 

ಪ್ರಧಾನಿ ಮೋದಿ, ತಮ್ಮ ಬದುಕು ಹಾಗೂ ಕೆಲಸದ ಮೂಲಕ ನಮ್ಮ ಬದುಕಿಗೆ ಸ್ಫೂರ್ತಿ ನೀಡಲು ಮಹಿಳೆಯರಿಗೆ ಈ ಮಹಿಳಾ ದಿನದಂದು ನನ್ನ ಸಾಮಾಜಿ ಜಾಲತಾಣದ ಖಾತೆಯನ್ನು ಬಿಟ್ಟುಕೊಡುತ್ತೇನೆ. ಇದು ಲಕ್ಷಾಂತರ ಜನರರಲ್ಲಿ ಸ್ಫೂರ್ತಿಯನ್ನು ಬೆಳೆಸುತ್ತದೆ. ನೀವು ಅಂತಹ ಮಹಿಳೆಯಾ? ಅಥವಾ ನಿಮಗೆ ಅಂತಹ ಮಹಿಳೆಯ ಬಗ್ಗೆ ಗೊತ್ತಿದೆಯಾ? ಅಂತಹ ಕಥೆಗಳನ್ನು ಶೀ ಇನ್‌ಸ್ಪೈರ್ಸ್ ಅಸ್ ಹ್ಯಾಷ್‍ಟ್ಯಾಗ್‍ನಲ್ಲಿ ಹಂಚಿಕೊಳ್ಳಿ ಎಂದು ತಿಳಿಸಿದ್ದರು.

ಪ್ರಧಾನಿ ಮೋದಿ ಅವರ ಟ್ವೀಟ್ ಹಿನ್ನೆಲೆಯಲ್ಲಿ ಭಾರತದ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಲಿಸಿಪ್ರಿಯಾ ಕಂಗುಜಮ್ ಅವರನ್ನು ಪರಿಚಯಿಸಲಾಗಿತ್ತು. ಬಳಿಕ ಮೋದಿ ಅವರು ಲಿಸಿಪ್ರಿಯಾ ಕಂಗುಜಮ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಬಾಲಕಿ ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ನಾಳೆ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಭಾರತದ ಮೊದಲ ಪ್ಯಾರಟ್ರೂಪರ್ ತಂಡದ ಕ್ಯಾಪ್ಟನ್ ಆಗಿದ್ದ ರುಚಿ ಶರ್ಮಾ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!