ಕಮಲ್ ನಾಥ್ 
ದೇಶ

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆ ಪಡೆದ ಕಮಲ್ ನಾಥ್

ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು ಕ್ಷಣ ಕ್ಷಣಕ್ಕೆ ಬಿಗಡಾಯಿಸುತ್ತಿದ್ದು ಇದೀಗ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ಸಂಪುಟದ ಎಲ್ಲ ಸಚಿವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ.

ಭೋಪಾಲ್: ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು ಕ್ಷಣ ಕ್ಷಣಕ್ಕೆ ಬಿಗಡಾಯಿಸುತ್ತಿದ್ದು ಇದೀಗ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ಸಂಪುಟದ ಎಲ್ಲ ಸಚಿವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ.

ಈ ಮುನ್ನ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರೊಡನೆ ಭೇಟಿಯಾಗಿದ್ದ ಕಮಲ್ ನಾಥ್ ಅವರ ಮನೆಯಲ್ಲೇ ತುರ್ತು ಸಂಪುಟ ಸಭೆ ಕರೆದಿದ್ದರು.

ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ  ಮಧ್ಯಪ್ರದೇಶದ ಎಲ್ಲಾ 16 ಕ್ಯಾಬಿನೆಟ್ ಮಂತ್ರಿಗಳು ತಮ್ಮ ರಾಜೀನಾಮೆಯನ್ನು ಸಿಎಂಗೆ ನೀಡಿದ್ದು ಅವೆಲ್ಲವೂ ಸ್ವೀಕೃತವಾಗಿದೆ. 

ಈ ನಡುವೆ. ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 6 ಸಚಿವರು ಸೇರಿದಂತೆ 17 ಕಾಂಗ್ರೆಸ್ ಶಾಸಕರು ಬೆಂಗಳೂರಿನ ಮಾರೇನಹಳ್ಳಿಯ ಹೋಟೆಲ್ ನಲ್ಲಿ ತಂಗಿದ್ದಾರೆ. ಇವರೆಲ್ಲರೂ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾಗಿದ್ದು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಎಲ್ಲ ನಾಯಕರ ಫೋನ್ ಸ್ವಿಚ್ ಆಫ್ ಆಗಿದೆ.

ಸಭೆಯಲ್ಲಿ ಹಾಜರಿದ್ದ ಎಲ್ಲ ಸಚಿವರು ತಮ್ಮ ರಾಜೀನಾಮೆಯನ್ನು (ಸಿಎಂ ಕಮಲ್ ನಾಥ್ ಅವರಿಗೆ) ಹಸ್ತಾಂತರಿಸಿದ್ದಾರೆ. ರಾಜ್ಯ ಸಚಿವ ಸಂಪುಟವನ್ನು ಪುನರ್ನಿರ್ಮಿಸಲು ಮತ್ತು ಬಿಜೆಪಿ ರಚಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಅವರನ್ನು ವಿನಂತಿಸಿದ್ದೇವೆ ಎಂದು ಕಾಂಗ್ರೆಸ್ ನ ಪಿಸಿ ಶರ್ಮಾ ಹೇಳಿದ್ದಾರೆ.

ಮಾದ್ಯಮದೊಡನೆ ಮಾತನಾಡಿದ ಕಮಲ್ ನಾಥ್ "ಮಾಫಿಯಾ ಸಹಾಯದಿಂದ ಅಸ್ಥಿರತೆಯನ್ನು ಸೃಷ್ಟಿಸುವ ಆ ಶಕ್ತಿಗಳು ಯಶಸ್ವಿಯಾಗಲು ನಾನು ಬಿಡುವುದಿಲ್ಲ ಮಧ್ಯಪ್ರದೇಶದ ಜನರ ನಂಬಿಕೆ ಮತ್ತು ಪ್ರೀತಿಯು ನನ್ನ ದೊಡ್ಡ ಶಕ್ತಿಯಾಗಿದೆ. ಸರ್ಕಾರದಲ್ಲಿ ಅಸ್ಥಿರತೆಯನ್ನು ಉಂಟುಮಾಡುವ ಆ ಶಕ್ತಿಗಳನ್ನು ಯಶಸ್ವಿಯಾಗಲು ನಾನು ಬಿಡುವುದಿ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ