ದೇಶ

ನಿರ್ಭಯ ಪ್ರಕರಣ: ಜೀವದಾನಕ್ಕಾಗಿ ಲೆಫ್ಟಿನೆಂಟ್ ಗೌರ್ನರ್ ಮೊರೆ ಹೋದ ಅಪರಾಧಿ

Srinivas Rao BV

ನವದೆಹಲಿ: ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಕಾನೂನಿನ ಎಲ್ಲಾ ಬಾಗಿಲು ಮುಚ್ಚಿದ್ದರೂ, ಮರಣದಂಡನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
 
ಅಪರಾಧಿ ವಿನಯ್ ಶರ್ಮ ಪರ ವಕೀಲ ಎಪಿ ಸಿಂಗ್ ತನ್ನ ಕಕ್ಷಿದಾರನ ಮರಣದಂಡನೆಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಬೇಕೆಂದು ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಗೆ ಮನವಿ ಸಲ್ಲಿಸಿದ್ದಾರೆ. 

ಸಿಆರ್ ಪಿಸಿ ಸೆಕ್ಷನ್ 432 ಹಾಗೂ 433 ಅಡಿಯಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಸಕಾರಾತ್ಮಕ ಸುಧಾರಣೆ, ವಯಸ್ಸು, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕೆಂದು ವಕೀಲರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. 

SCROLL FOR NEXT